ನವದೆಹಲಿ: ಕೇಂದ್ರ ಸರಕಾರದ ಸೂಚನೆಯಂತೆ ಚೈನೀಸ್ ಆಪ್ ಟಿಕ್ ಟಾಕ್ ಗೆ ಗೂಗಲ್ ನಿಷೇಧ ಹೇರಿದೆ. ತಮಿಳುನಾಡಿನ ನ್ಯಾಯಾಲಯ ಏಪ್ರಿಲ್ 3 ರಂದು ಟಿಕ್ ಟಾಕ್ ಗೆ ನಿಷೇಧ ಹೇರಲು ಸೂಚಿಸಿತ್ತು.
ಇದು ಪೋರ್ನೋಗ್ರಫಿ ಮತ್ತು ಮಕ್ಕಳನ್ನು ಲೈಂಗಿಕ ವಿಚಾರಗಳಿಗೆ ಸೆಳೆಯಲು ಪ್ರಚೋದಿಸುತ್ತದೆ ಎಂಬ ಕಾರಣಕ್ಕೆ ನ್ಯಾಯಾಲಯ ಈ ಆಪ್ ಗೆ ನಿಷೇಧ ಹೇರಲು ಸೂಚಿಸಿತ್ತು.
ಈ ಬಗ್ಗೆ ತಮಿಳುನಾಡಿನ ನ್ಯಾಯಾಲಯದಲ್ಲಿ ಸಾರ್ಜವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಈ ಆಪ್ ನಿಷೇಧ ಹೇರಲು ನ್ಯಾಯಾಲಯ ಆದೇಶಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ