Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಲಕಿಯ ಸಾವಿಗೆ ಕಾರಣವಾಯ್ತು ರಸ್ತೆಯಲ್ಲಿ ಬಿದ್ದಿದ್ದ ಈ ವಸ್ತು

ಬಾಲಕಿಯ ಸಾವಿಗೆ ಕಾರಣವಾಯ್ತು ರಸ್ತೆಯಲ್ಲಿ ಬಿದ್ದಿದ್ದ ಈ ವಸ್ತು
ಡೆಹ್ರಾಡೂನ್ , ಮಂಗಳವಾರ, 26 ಫೆಬ್ರವರಿ 2019 (06:38 IST)
ಡೆಹ್ರಾಡೂನ್ : ಆಟವಾಡುವಾಗ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆ ಸೇವಿಸಿದ ಮೂವರು ಮಕ್ಕಳಲ್ಲಿ ಓರ್ವ ಬಾಲಕಿ ಮೃತಪಟ್ಟ ಘಟನೆ ಡೆಹ್ರಾಡೂನಿನಲ್ಲಿ ನಡೆದಿದೆ.


ಶಗುನ್(4) ಮೃತಪಟ್ಟ ಬಾಲಕಿ. ಬಾಲಕಿಯ ಕುಟುಂಬದವರು ಮದುವೆ ಸಮಾರಂಭಕ್ಕಾಗಿ ಜವಳಿ ಖರೀದಿಸಲು ಹೋಗುವಾಗ ಶಗುನ್  ಹಾಗೂ ಆಕೆಯ ಸಹೋದರನನ್ನು ಅಜ್ಜನ ಬಳಿ ಬಿಟ್ಟು ಹೋಗಿದ್ದರು. ಇವರಿಬ್ಬರು ಸೇರಿ ಪಕ್ಕದ ಮನೆ ಬಾಲಕನ ಜೊತೆ ಆಟವಾಡುತ್ತಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಮಾತ್ರೆಯನ್ನು ತೆಗೆದುಕೊಂಡು  ಮೂವರು ಹಂಚಿಕೊಂಡು ತಿಂದಿದ್ದಾರೆ .


ಮಾತ್ರೆ ಸೇವಿಸಿ ಕೆಲವೇ ಹೊತ್ತಿನಲ್ಲಿ ಶಗುನ್, ಪಿಯೂಷ್ ಹಾಗೂ ಇನ್ನೊರ್ವ ಬಾಲಕನ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಪಕ್ಕದ ಮನೆಯ ಮಹಿಳೆ ತನ್ನ ಮಗನ ಬಾಯಿಗೆ ಕೈ ಹಾಕಿ ವಾಂತಿ ಮಾಡಿಸಿದ್ದಾಳೆ. ಇದರಿಂದ ಆ ಬಾಲಕನ ಆರೋಗ್ಯದ ಸ್ಥಿತಿ ಸುಧಾರಿಸಿದೆ. ಆದರೆ ಬಾಲಕಿಯ ತಂದೆ ಆಕೆಯನ್ನು ಹಾಗೂ ಆಕೆಯ ಸಹೋದರನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಶಗೂನ್ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಪಿಯೂಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಒಂದು ವಿಚಿತ್ರ ಎಂದ ಬಿಜೆಪಿ ಮುಖಂಡ