ಭ್ರಷ್ಟಾಚಾರ, ಕಾಳಧನ, ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ ಏಕಾಏಕಿ 500 ಮತ್ತು 1,000 ರೂಪಾಯಿ ನೋಟುಗಳ ಮೇಲೆ ನಿಷೇಧ ಹೇರಿದ್ದಾರೆ. ಅಂದಿನಿಂದ ಈ ದೊಡ್ಡ ಮೊತ್ತದ ಮುಖಬೆಲೆಯ ನೋಟುಗಳು ಕೇವಲ ಕಾಗದಗಳು ಎನ್ನುವಂತಾಗಿವೆ.
ಬುಧವಾರ ಗ್ರೇಟರ್ ನೊಯ್ಡಾದಲ್ಲಿ ಬಡ ಕಾರ್ಮಿಕನೊಬ್ಬನ ಪರ್ಸ್ ಎಗರಿಸಿದ್ದ ಕಳ್ಳರು ಅದರಲ್ಲಿರುವುದು 500 ರೂಪಾಯಿಗಳ ನೋಟು ಎಂಬುದು ಅರಿವಾದ ಮೇಲೆ ಪರ್ಸ್ ಹಿಂತಿಗುರಿಸಿ 100ರ ನೋಟು ಇಟ್ಟುಕೊಂಡಿಲ್ಲವೆಂದು ಆತನಿಗೆ ಕಪಾಳಮೋಕ್ಷ ಮಾಡಿದ ಬಗ್ಗೆ ಬಹುಶಃ ಓದಿರುತ್ತೀರಿ. ಇಂತಹ ಹಲವು ದೃಷ್ಟಾಂತಗಳು ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿವೆ. ಭಿಕ್ಷುಕರು ಸಹ ಈ ನೋಟನ್ನು ಮುಟ್ಟುತ್ತಿಲ್ಲ ಎಂಬ ವರದಿಗಳು ಬರುತ್ತಿವೆ.
ಚೆನ್ನೈ ಮಹಾನಗರದಲ್ಲಿ ವ್ಯಕ್ತಿಯೊಬ್ಬ ಭಿಕ್ಷುಕನಿಗೆ 1,000 ರೂಪಾಯಿ ಮುಖಬೆಲೆ ನೋಟನ್ನು ಕೊಟ್ಟಿದ್ದಾನೆ. ಆದರೆ ಆತಕಡಿಮೆ ಮೊತ್ತದ ಹಣ ನೀಡಿ ಎಂದು ಅದನ್ನು ಹಿಂತಿರುಗಿಸಿದ್ದಾನೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ