ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತಕ್ಕೂ ಮುನ್ನಾ ಸ್ವಘೋಷಿತ ದೇವಮಾನವ ನಾರಾಯಣ ಸಾಕಾರ ಹರಿ ಅವರ ಪಾದದ ದೂಳನ್ನು ಹಣೆಗೆ ಹಚ್ಚಿಕೊಳ್ಳಲು ಹೇಳಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ವರದಿಯಾಗಿದೆ.
ದೇವಮಾನವ ನಾರಾಯಣ ಅವರು ಪಾದದ ದೂಳನ್ನು ಹಣೆಗೆ ಹಚ್ಚಿಕೊಳ್ಳಲು ಮುಂದಾದ ಭಕ್ತರನ್ನು ಖಾಸಗಿ ಭದ್ರತಾ ಸಿಬ್ಬಂದಿ ನೂಕಿದ್ದೇ ಇದಕ್ಕೇ ಪ್ರಮುಖ ಕಾರಣ ಎಂದು ಉಪ ವಿಭಾಗ ಮ್ಯಾಜಿಸ್ಟ್ರೇಟ್ ಸಿಕಂದರ್ ರಾವ್ ನಡೆಸಿದ ತನಿಖೆಯ ಪ್ರಾಥಮಿಕ ವರದಿ ಹೇಳಿದೆ.
ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಅವರು ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. ಇನ್ನೂ ಈ ಪ್ರಕರಣವನ್ನು ಯೋಗಿ ಆದಿತ್ಯನಾಥ್ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಇದರೊಂದಿಗೆ ಎಡಿಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು. ಒಟ್ಟು 121 ಜನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹರಿಯಾಣ, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ಸೇರಿದ ಆರು ಜನರಿದ್ದಾರೆ ಎಂದಿದ್ದಾರೆ.<>