ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಧುಮುಕಿರುವ ಪ್ರಧಾನಿ ಮೋದಿ, ರಾಜ್ಯದಲ್ಲಿನ ಕದನವನ್ನು 1857ರ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಸಿದ್ದಾರೆ.
1857ರಲ್ಲಿ ಇಲ್ಲಿ (ಮೀರತ್) ಸ್ವಾತಂತ್ರ ಹೋರಾಟದ ಆರಂಭವಾಗಿತ್ತು. ಆಗ ಬ್ರಿಟಿಷರ ವಿರುದ್ಧ ಹೋರಾಟ ನಡೆದಿತ್ತು. ಮತ್ತೀಗ ಬಡತನವನ್ನು ನೀರ್ಮೂಲನೆಗೊಳಿಸಲು ಹೋರಾಡುತ್ತಿದ್ದೇವೆ, ಎಂದು ಮೋದಿ ಹೇಳಿದ್ದಾರೆ.
ಅಭಿವೃದ್ಧಿಯತ್ತ ಸಾಗಲು ಸಾಕಷ್ಟು ಸಂಪನ್ಮೂಲವಿದ್ದರೂ ಇಲ್ಲಿನ ಯುವಕರು ಉದ್ಯೋಗವನ್ನರಸಿಕೊಂಡು ಬೇರೆ ರಾಜ್ಯಗಳಿಗೆ ಹೋಗಬೇಕಾಗಿದೆ. ಕೇಂದ್ರ ಸರ್ಕಾರ ರಾಜ್ಯದ ವಿಕಾಸಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸುತ್ತದೆ. ಆದರೆ ಪ್ರತಿಯೊಂದು ಉಪಕ್ರಮಗಳಿಗೆ ಲಖನೌನಲ್ಲೇ ತಡೆಯೊಡ್ಡಲಾಗುತ್ತದೆ ಎಂದು ಪ್ರಧಾನಿ ಅಖಿಲೇಶ್ ಸರ್ಕಾರವನ್ನು ದೂಷಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 11 ರಿಂದ ಮಾರ್ಚ್ 8ರವರೆಗೆ 7 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.