Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಾಯಿ ಮಗುವಿನ ಬಾಂಧವ್ಯ ಅತ್ಯದ್ಭುತವಾದದ್ದು ಎನ್ನುವುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ

ತಾಯಿ ಮಗುವಿನ ಬಾಂಧವ್ಯ ಅತ್ಯದ್ಭುತವಾದದ್ದು ಎನ್ನುವುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ
ಲಖನೌ , ಬುಧವಾರ, 1 ಮೇ 2019 (06:44 IST)
ಲಖನೌ : ತಾಯಿ ಮಗುವಿನ ಸಂಬಂಧ ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾಗಿದ್ದು ಎಂಬುವುದಕ್ಕೆ ಇದೀಗ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಈ ಘಟನೆಯೇ ಒಂದು ಪ್ರತ್ಯೀಕ್ಷ ಸಾಕ್ಷಿ.


ಲಖನೌನ ಕೆಜಿಎಂಯುನ ಕ್ವೀನ್‌ ಮೇರಿ ಆಸ್ಪತ್ರೆಯಲ್ಲಿ ತಾಯಿಯ ಎದೆಯಿಂದ ಎದೆಹಾಲು ಬರದ ಕಾರಣ ಮಗುವಿಗೆ ಎದೆಹಾಲು ಸಿಗದೆ ತುಂಬಾ ಅಪಾಯದಲ್ಲಿತ್ತು. ಆ ವೇಳೆ ವೈದ್ಯರು ಯಾವುದೇ ಚಿಕಿತ್ಸೆ ನೀಡಿದರೂ ತಾಯಿಯ ಎದೆಯಿಂದ ಹಾಲು ಬರಿಸಲು ಸಾಧ್ಯವಾಗಲಿಲ್ಲ .ಆದರೆ ನಂತರ ತಾಯಿಯ ಎದೆಯಿಂದ ಹಾಲು ಬರಲು ವೈದ್ಯರು ಮಾಡಿದ ಸಾಹಸವನ್ನು ಕೇಳಿದ್ರೆ  ನೀವು ಅಚ್ಚರಿಪಡುತ್ತೀರಾ.


 

ಹೌದು. ಬ್ರೆಸ್ಟ್ ಪಂಪಿಂಗ್‌ ಮುಂತಾದ ಪ್ರಯತ್ನಗಳನ್ನು ಮಾಡಿದರೂ ಸಹ ಎದೆಹಾಲು ಬರದಿದ್ದಾಗ, ಅಲ್ಲದೇ ತಾಯಿಯನ್ನು ಮಗುವಿನ ಬಳಿ ಕರೆತರಲು ಆಗದ ಕಾರಣ ಆ ತಾಯಿಗೆ ಕೌನ್ಸೆಲಿಂಗ್ ಮೂಲಕ ಮಗುವಿನ ಫೋಟೋ ತೋರಿಸಿ ಮಗುವಿನ ಪರಿಸ್ಥಿತಿ ವಿವರಿಸಿದಾಗ ತಾಯಿ ಭಾವನಾತ್ಮಕವಾಗಿದ್ದಾರೆ. ಆಗ ಕೆಲವೇ ಹೊತ್ತಿನಲ್ಲಿ ಆಕೆಯ ಎದೆಯಿಂದ ಹಾಲು ಬಂದಿದೆ. ನಂತರ ತಾಯಿ ಮಗುವಿಗೆ ಎದೆಹಾಲುಣಿಸಿ ಅದರ ಜೀವವನ್ನು ಉಳಿಸಿದ್ದಾಳೆ.

 

ಹೆರಿಗೆಯ ಒತ್ತಡದಿಂದ ಹಾಗೂ ಕೆಲ ಕಾರಣಗಳಿಂದಾಗಿ ಹಾರ್ಮೋನ್‌ ಕೊರತೆಯಾಗಿ ತಾಯಿಯ ಎದೆ ಹಾಲನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ಮುಟ್ಟಿಸಿದರೆ ಹಾರ್ಮೋನ್‌ ಸಕ್ರಿಯವಾಗುತ್ತದೆ. ಇದರಿಂದ ಹಾಲು ಉಣಿಸಲು ಸಾಧ್ಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ತಾಯಿ ಮಗುವಿನ ಬಾಂಧವ್ಯ ಎಂತಹದ್ದು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇರೆ ಬೇಕಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಹೊಸಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪುರುಷರು ಮಾಡಿದ ಉಪಾಯವೇನು ಗೊತ್ತಾ?