Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಪೂರ್ಣ ದೇಶ ಪ್ರಧಾನಿ ಜತೆ ನಿಲ್ಲಬೇಕು: ಕೇಜ್ರಿವಾಲ್

ಸಂಪೂರ್ಣ ದೇಶ ಪ್ರಧಾನಿ ಜತೆ ನಿಲ್ಲಬೇಕು: ಕೇಜ್ರಿವಾಲ್
ನವದೆಹಲಿ , ಶುಕ್ರವಾರ, 7 ಅಕ್ಟೋಬರ್ 2016 (15:01 IST)
ಸೀಮಿತ ದಾಳಿಗೆ ಸಾಕ್ಷ್ಯ ನೀಡಿ ಎನ್ನುವುದರ ಮೂಲಕ ವ್ಯಾಪಕ ಖಂಡನೆಗೆ ಗುರಿಯಾಗುತ್ತಿದ್ದಂತೆ ರಾಗ ಬದಲಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೀಗ ಸೇನಾ ಕಾರ್ಯಾಚರಣೆಯನ್ನು ರಾಜಕೀಕರಣಗೊಳಿಸಬಾರದು. ಸಂಪೂರ್ಣ ದೇಶ ಪ್ರಧಾನಿ ಜತೆ ನಿಲ್ಲಬೇಕು ಎಂದಿದ್ದಾರೆ. 

ಪ್ರಧಾನಿಯನ್ನು 'ರಕ್ತದ ದಲ್ಲಾಳಿ' ಎಂದ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿರುವ ಅವರು, ರಾಹುಲ್ ಗಾಂಧಿ ನಮ್ಮ ಸೈನಿಕರ ಬಗ್ಗೆ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಾವೆಲ್ಲ ಒಂದಾಗಿ ನಿಲ್ಲಬೇಕಾದ ಸಮಯವಿದು ಎಂದಿದ್ದಾರೆ ಕೇಜ್ರಿವಾಲ್.
 
ನಾವು ನಮ್ಮಲ್ಲಿನ ಭೇದವನ್ನು ಮರೆತು ನಮ್ಮ ಸೈನ್ಯದ ಜತೆ ನಿಲ್ಲಬೇಕು. ಸಂಪೂರ್ಣ ದೇಶ ಪ್ರಧಾನಿ ಜತೆ ನಿಲ್ಲಬೇಕು. ಇಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ ದೆಹಲಿ ಸಿಎಂ. 
 
ಸೀಮಿತ ದಾಳಿ ನಡೆಸಿದ ಬಳಿಕ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದ ಕೇಜ್ರಿವಾಲ್, ಪಾಕಿಸ್ತಾನದ ಭಾರತ ವಿರೋಧಿ ಆಂದೋಲನಕ್ಕೆ ಉತ್ತರ ನೀಡಲು ದಾಳಿಯ ಸಾಕ್ಷ್ಯವಾದ ವಿಡಿಯೋವನ್ನು ಬಹಿರಂಗ ಪಡಿಸಿ ಎಂದು ಸವಾಲು ಹಾಕಿ ವಿವಾದಕ್ಕೆ ಕಾರಣರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಮಾರಾಟ ನಿಷೇಧ ಸಾಧ್ಯವಿಲ್ಲ, ಕುಡಿಬೇಡಿ ಅಂತಾ ಹೇಳಬಹುದು ಅಷ್ಟೇ: ಎಚ್.ವೈ.ಮೇಟಿ