ನವದೆಹಲಿ: ಮಕ್ಕಳ ಕಳ್ಳಸಾಗಣಿಕೆ ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಇಂತಹದ್ದೇ ಒಂದು ದುಷ್ಕೃತ್ಯ ನಡೆಸಲು ಹೋಗಿ ಮೂವರು ಮಹಿಳೆಯರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ಜಮಾ ಮಸೀದಿ ಹೊರಭಾಗದಿಂದ ಮಗುವನ್ನು ಕದ್ದ ಮಹಿಳೆಯರಲ್ಲಿ ಒಬ್ಬಾಕೆ ವ್ಯಾಟ್ಸಪ್ ನಲ್ಲಿ 1.8 ಲಕ್ಷ ರೂ. ಗೆ ಮಾರಾಟಕ್ಕಿಟ್ಟಿದ್ದಳು. ಮಗುವಿನ ಆಕಾಂಕ್ಷಿಗಳು ಯಾರೋ ಈ ಸಂದೇಶ ನೋಡಿ ಪೊಲೀಸರಿಗೆ ಸುಳಿವು ನೀಡಿದ್ದರು.
ಅದರಂತೆ ವಿಚಾರಣೆ ನಡೆಸಿದಾಗ ಮಗುವಿನ ಕಳ್ಳ ಮಾರಾಟ ಜಾಲ ಪತ್ತೆಯಾಗಿದೆ. ಈ ಮಗು ಆಗಲೇ ಮೂವರು ಮಹಿಳೆಯರಿಂದ ಹಸ್ತಾಂತರಗೊಂಡಿರುವುದು ಬೆಳಕಿಗೆ ಬಂತು. ಪೊಲೀಸರು ಹುಡುಕುತ್ತಿದ್ದಾರೆನ್ನುವಾಗ ಕಳ್ಳಿಯರ ಪೈಕಿ ಓರ್ವ ಮಹಿಳೆ ಆಕೆಯನ್ನು ಪಕ್ಕದ ದೇವಸ್ಥಾನವೊಂದರಲ್ಲಿ ಇರಿಸಿ ಪೊಲೀಸರಿಗೆ ಫೋನ್ ಮಾಡಿ ಮಗು ಅಕಸ್ಮಾತ್ತಾಗಿ ಇಲ್ಲಿ ಸಿಕ್ಕಿದ್ದೆಂದು ನಾಟಕವಾಡಿದ್ದಾಳೆ.
ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ಇದೀಗ ಮಗುವನ್ನು ರಕ್ಷಿಸಿದ ಪೊಲೀಸರು ಪ್ರಕರಣ ಹಿಂದಿದ್ದ ಮೂವರೂ ಮಹಿಳೆಯರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ