ನವದೆಹಲಿ: ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ಇಂದು ಮಹತ್ತರವಾದ ತೀರ್ಪು ನೀಡಿದೆ. ವಿವಾದಿತ ಭೂಮಿ ಹಿಂದೂಗಳ ಪಾಲಾಗಿದೆ. ಮುಸ್ಲಿಂರಿಗೆ ಪರ್ಯಾಯ 5 ಎಕರೆ ಭೂಮಿಯನ್ನು ನೀಡಲಾಗಿದೆ.ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಈ ತೀರ್ಪು ಸಮಾಧಾನ ತಂದಿಲ್ಲವೆಂದು ದೆಹಲಿಯಲ್ಲಿ ಹೇಳಿದೆ.
ಸುಪ್ರೀಂಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ.ಆದರೆ ತೀರ್ಪು ನಮಗೆ ಸಮಾಧಾನ ತಂದಿಲ್ಲ. ನಾವು ನಿರೀಕ್ಷಿಸಿದಂತೆ ತೀರ್ಪು ಬಂದಿಲ್ಲ. ನಮ್ಮ ಭೂಮಿಯನ್ನು ಬೇರೆಯವರಿಗೆ ಕೊಡಲಾಗಿದೆ ಎಂದು ದೆಹಲಿಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿಕೆ ನೀಡಿದ್ದಾರೆ.