ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಮಗಳೆಂದು ಹೇಳಿಕೊಂಡು ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದ ಬೆಂಗಳೂರಿನ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಬೆಂಗಳೂರಿನ ಅಮೃತಾ ಅಲಿಯಾಸ್ ಮಂಜುಳಾ ಅವರು, ತಾನು ಜೆ.ಜಯಲಲಿತಾ ಅವರ ಮಗಳಾಗಿದ್ದು, ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ, ಈ ಅರ್ಜಿಯನ್ನು ತಿರಸ್ಕರಿಸುವ ಸುಪ್ರೀಂಕೋರ್ಟ್ ಕರ್ನಾಟಕದ ಹೈಕೋರ್ಟ್ ಮೊರೆ ಹೋಗುವಂತೆ ಸಲಹೆ ನೀಡಿದೆ.
ಜಯಲಲಿತಾ ಅವರ ನಿಧನದ ನಂತರ ಉತ್ತರಾಧಿಕಾರಕ್ಕೆ ಸಂಬಂಧಿಸಿ ಸಾಕಷ್ಟು ವಿವಾದಗಳು ಎದ್ದಿದ್ದವು. ಆದರೆ, ಬೆಂಗಳೂರಿನ ಮಹಿಳೆಗೆ ಜಯಲಲಿತಾ ಅವರ ಆಪ್ತರಾದ ಎಲ್.ಎಸ್.ಲಲಿತಾ ಹಾಗೂ ರಂಜನಿ ರವೀಂದ್ರನಾಥ ಅವರು ಬೆಂಬಲವಾಗಿ ನಿಂತಿದ್ದಾರೆ.