ನವದೆಹಲಿ, ಸೆ 24 : ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತವು ನಿರ್ವಹಣೆ ಮಾಡಿದ ರೀತಿಯಲ್ಲಿ ಬೇರೆ ಯಾವ ದೇಶವು ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳುವ ಮೂಲಕ ಕೋವಿಡ್ ವೇಳೆ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದೆ.
ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂಪಾಯಿ ನೀಡುವ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
"ಇಂದು ನಾವು ಬಹಳ ಸಂತಸವಾಗಿದ್ದೇವೆ. ಸರ್ಕಾರದ ಈ ಕಾರ್ಯದಿಂದಾಗಿ ಕೋವಿಡ್‌ನಿಂದ ತೊಂದರೆಗೆ ಒಳಗಾದ ಜನರಿಗೆ ಈ ಮೂಲಕ ಕೊಂಚ ಸಮಾಧಾನ ದೊರೆಯಲಿದೆ. ಕೋವಿಡ್‌ನಿಂದ ತೊಂದರೆಗೆ ಒಳಗಾದ ಜನರಿಗೆ ಕೊಂಚ ಸಹಾಯವನ್ನು ಮಾಡುವ ಸರ್ಕಾರದ ಈ ನಿರ್ಧಾರದಿಂದ ನಾವು ಸಂತಸವಾಗಿದ್ದೇವೆ," ಎಂದು ನ್ಯಾಯಮೂರ್ತಿ ಎಮ್ ಆರ್ ಶಾ ಹೇಳಿದ್ದಾರೆ.
ಏಕಾಏಕಿ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಾಗ ಭಾರತವು ಈ ಅಲೆಯನ್ನು ಎದುರಿಸಲು ಸಿದ್ದವಾಗಿರದಿದ್ದರೂ ಹಾಗೂ ವೈದ್ಯಕೀಯ ಆಮ್ಲಜನಕದ ಕೊರತೆ ಕಾಣಿಸಿಕೊಂಡಾ ಸಾವಿರಾರು ಸಾವುಗಳು ಸಂಭವಿಸಿದರೂ ಭಾರತ ಆ ಸಂದರ್ಭದಲ್ಲಿ ಈ ಅಲೆಯನ್ನು ಎದುರಿಸಿದ ರೀತಿಯನ್ನು ನ್ಯಾಯಮೂರ್ತಿಗಳಾದ ಮ್ ಆರ್ ಶಾ ಹಾಗೂ ಎ ಎಸ್ ಬೋಪಣ್ಣ ಶ್ಲಾಘಿಸಿದರು.
"ಈ ನಮ್ಮ ಜನರಿಗೆ ನಮ್ಮ ದೇಶ ಲಸಿಕೆಯ ವೆಚ್ಚವನ್ನು ನಿಭಾಯಿಸಿದೆ, ಈ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಿದೆ, ಹಾಗೆಯೇ ಪ್ರತಿಕೂಲ ಸನ್ನಿವೇಶಗಳನ್ನು ಕೂಡಾ ದೇಶವು ಕೋವಿಡ್ ಅನ್ನು ಎದುರಿಸಿದೆ. ಆ ಸಂದರ್ಭದಲ್ಲಿ ನಾವು ಉತ್ತಮ ಹೆಜ್ಜೆಗಳನ್ನು ಇರಿಸಿದ್ದೇವೆ. ಭಾರತ ಏನು ಮಾಡಿದೆ ಅಂತಹ ಕಾರ್ಯವನ್ನು ಬೇರೆ ಯಾವ ದೇಶವೂ ಕೂಡಾ ಮಾಡಿಲ್ಲ," ಎಂದು ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್ಡಿಎಮ್ಎ) ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರವಾಗಿ 50,000 ರೂಪಾಯಿ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ ಎಂದು ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. "ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುವುದು, ಕೋವಿಡ್ ಪರಿಹಾರ ಕಾರ್ಯ ನಿರ್ವಹಿಸಿದವರಿಗೆ ಹಾಗೂ ಕೋವಿಡ್ ನಿರ್ವಹಣಾ ಕಾರ್ಯದಲ್ಲಿ ಇದ್ದವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದೆ.
ಕೋವಿಡ್ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರವು 50 ಸಾವಿರ ಪರಿಹಾರ ನೀಡುತ್ತಿದೆ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರವು ಹೇಳಿದಂತೆ ಪರಿಹಾರದ ಹೊಣೆ ರಾಜ್ಯ ಸರ್ಕಾರದ್ದಾಗಿರುತ್ತದೆ. ಈ ಹಣವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಒದಗಿಸಲಾಗುತ್ತದೆ. ಈ ಹಿಂದೆ ಕೋವಿಡ್ಗೆ ಬಲಿಯಾದವರಿಗೆ ಪರಿಹಾರ ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ 10 ದಿನಗಳ ಕಾಲಾವಕಾಶವನ್ನು ನೀಡಿತ್ತು.