ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಪ್ರದರ್ಶನ ನೀಡುವುದನ್ನು ಅಥವಾ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ ಅರ್ಜಿದಾರರಲ್ಲಿ ಅಷ್ಟು ಸಂಕುಚಿತ ಮನೋಭಾವ ಇರಬಾರದು ಎಂದು ಹೇಳಿದ್ದು, ಫೈಜ್ ಅನ್ವರ್ ಖುರೇಷಿ ಸಲ್ಲಿಸಿದ ಮನವಿಯನ್ನು ರದ್ದುಗೊಳಿಸಿದೆ.