Webdunia - Bharat's app for daily news and videos

Install App

ಸ್ನ್ಯಾಪ್ಡೀಲ್ ಕೂ ಅಪ್ಲಿಕೇಶನ್ ಸ್ಥಳೀಯ ಭಾಷೆಗಳಲ್ಲಿ ಲಭ್ಯ

Webdunia
ಗುರುವಾರ, 2 ಡಿಸೆಂಬರ್ 2021 (11:17 IST)
ಪ್ರಮುಖ ಇ ಕಾಮರ್ಸ್ ವೇದಿಕೆ ಸ್ನ್ಯಾಪ್ಡೀಲ್ ಸ್ವದೇಶಿ ಸಾಮಾಜಿಕ ಜಾಲತಾಣ- ಕೂ-ವನ್ನು ಸೇರಿಕೊಂಡಿದ್ದು ತನ್ನ ಲಕ್ಷಾಂತರ ಭಾರತೀಯ ಬಳಕೆದಾರರಿಗೆ ಅವರದೇ ಭಾಷೆಯಲ್ಲಿ ಸೇವೆ ಒದಗಿಸಲು ಮುಂದಾಗಿದೆ.
ಭಾರತದ ಚಿಕ್ಕ ನಗರ ಮತ್ತು ಪಟ್ಟಣಗಳಲ್ಲಿನ ಜನರು ಆನ್ಲೈನ್ ಶಾಪಿಂಗ್ ಮಾಡುವುದನ್ನು ಹೆಚ್ಚಿಸಿರುವುದರಿಂದ ಇ-ಕಾಮರ್ಸ್ ಹೊಸ ರೂಪು ಪಡೆಯುತ್ತಿದೆ. ಉದ್ಯಮದ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಈ ಗ್ರಾಹಕರು ಸ್ಥಳೀಯ ಭಾಷೆಯಲ್ಲಿ ವಿಷಯ ಮತ್ತು ಮಾಹಿತಿಯನ್ನು ಬಯಸುತ್ತಿದ್ದಾರೆ.
ಸ್ನ್ಯಾಪ್ಡೀಲ್ ಭಾರತದಾದ್ಯಂತ ಬಳಕೆದಾರರೊಂದಿಗೆ ವಿಶೇಷವಾಗಿ ಟೈರ್ ಮತ್ತು ಪಟ್ಟಣಗಳಲ್ಲಿ ಅವರ ಮಾತೃಭಾಷೆಯಲ್ಲೇ ತೊಡಗಿಸಿಕೊಳ್ಳಲು Koo (ಕೂ) ಅಪ್ಲಿಕೇಶನ್ ನ ಹೊಸ ಬಹು-ಭಾಷಾ ವೈಶಿಷ್ಟ್ಯದ ಪ್ರಯೋಜನ ಪಡೆಯಲಿದ್ದು, ಮಾರಾಟ, ಡೀಲ್ಗಳು ಮತ್ತು ಕೊಡುಗೆಗಳ ಕುರಿತು ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳಲಿದೆ.
ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ಅವಕಾಶ ನೀಡುವ ವೇದಿಕೆ, Koo (ಕೂ) ಅಪ್ಲಿಕೇಶನ್ ಒಂಬತ್ತು ಭಾಷೆಗಳಲ್ಲಿ ಬಳಕೆಗೆ ಲಭ್ಯವಿದೆ - ಹಿಂದಿ, ಬೆಂಗಾಲಿ, ಅಸ್ಸಾಮಿ, ತೆಲುಗು, ತಮಿಳು, ಕನ್ನಡ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್. ಪ್ರಸ್ತುತ 15 ಮಿಲಿಯನ್ ಬಳಕೆದಾರರಿಂದ, ವೇಗವಾಗಿ ಬೆಳೆಯುತ್ತಿರುವ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಮುಂದಿನ ಒಂದು ವರ್ಷದಲ್ಲಿ 100 ಮಿಲಿಯನ್ ಡೌನ್ಲೋಡ್ಗಳನ್ನು ತಲುಪುವ ನಿರೀಕ್ಷೆಯಿದೆ.
ಏoo (ಕೂ) ಅಪ್ಲಿಕೇನ್ನಲ್ಲಿ ಖಾತೆಯನ್ನು ತೆರೆಯುವ ಮೂಲಕ ಮೊದಲ ಡಿಜಿಟಲ್ ಆರ್ಥಿಕತೆಯಲ್ಲಿ ತಮ್ಮ ಸ್ಥಳೀಯ ಭಾಷೆಯಲ್ಲಿ ಇಂಟರ್ನೆಟ್ ಬಳಕೆದಾರರ ವೈವಿಧ್ಯಮಯ ಜನಸಮೂಹವನ್ನು ಸ್ನ್ಯಾಪ್ಡೀಲ್ ತಲುಪಬಹುದಾಗಿದೆ. ಸ್ನ್ಯಾಪ್ಡೀಲ್ ಬ್ರ್ಯಾಂಡ್ ಮಾರ್ಕೆಟಿಂಗ್ ನಿರ್ದೇಶಕ ಸೌಮ್ಯದೀಪ್ ಚಟರ್ಜಿ " ಮೊಬೈಲ್ ಇಂಟರ್ನೆಟ್ ದೂರದ ಸ್ಥಳಗಳಲ್ಲಿನ ಜನರನ್ನು ತಲುಪಲು ಮತ್ತು ಸ್ಥಳೀಯ ಭಾಷೆಗಳಲ್ಲಿ ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಿಸಿದೆ. ಹೀಗಾಗಿ ಬಹುಭಾಷೆಯಲ್ಲಿ ವಿಷಯ ಬರೆಯಲು ಅಗಾಧ ಸಮಯ ಮತ್ತು ಶ್ರಮ ಬೇಕಾಗುತ್ತದೆ. Koo (ಕೂ) ನಂತಹ ವೇದಿಕೆ ನಮಗೆ ಸ್ಥಳೀಯ ಕ್ರಿಯಾಶೀಲ ಸಮುದಾಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ." ಎಂದು ಹೇಳಿದರು.
ಸ್ನ್ಯಾಪ್ಡೀಲ್ ತನ್ನ ಖಾತೆಯನ್ನು ತೆರೆದಿರುವುದನ್ನು ಸ್ವಾಗತಿಸಿರುವ Koo (ಕೂ) ಸಹ ಸಂಸ್ಥಾಪಕ ಮಯಾಂಕ್ ಬಿಡಾವತ್ಕಾ" ಸ್ನ್ಯಾಪ್ಡೀಲ್ನಂತಹ ಇ-ಕಾಮರ್ಸ್ ಕ್ಷೇತ್ರದ ದೈತ್ಯ ಮತ್ತು ಜನಪ್ರಿಯ ಕಂಪನಿ Koo (ಕೂ) ವೇದಿಕೆಯಲ್ಲಿ ಖಾತೆ ತೆರೆದಿರುವುದು ನಮಗೆ ಸಂತಸದ ವಿಷಯವಾಗಿದೆ.  Koo (ಕೂ) ಆ್ಯಪ್  ಭಾರತೀಯರಿಗೆ ಅವರ ಮಾತೃಭಾಷೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ನಮ್ಮಲ್ಲಿ ಅನುವಾದದಂತಹ ಹಲವು ಸ್ಮಾರ್ಟ್ ಫೀಚರ್ಗಳು ಬಳಕೆದಾರರಿಗೆ ಭಾಷೆಯ ಗಡಿಗಳನ್ನು ಮೀರಿ ಪರಸ್ಪರ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. Koo (ಕೂ) ಬಳಸಿಕೊಂಡು ಸ್ನ್ಯಾಪ್ಡೀಲ್ ಅಪಾರ ಸಂಖ್ಯೆಯ ಬಹುಭಾಷಾ ಬಳಕೆದಾರರ ಜೊತೆ ಸಂಪರ್ಕ ಸಾಧಿಸುವ ಕುರಿತು ನನಗೆ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments