ಕೋಟಾ : 40 ವರ್ಷದ ವ್ಯಕ್ತಿಯನ್ನು ಆತನ ಅತ್ತಿಗೆ ಮತ್ತು ಅವಳ ಪ್ರೇಮಿ ಸೇರಿ ಕೊಲೆ ಮಾಡಿದ ಘಟನೆ ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿ ತನ್ನ ಅತ್ತಿಗೆಗೆ ಹೊಡೆಯುವಂತೆ ತನ್ನ ಮಾನಸಿಕ ಅಸ್ವಸ್ಥ ಅಣ್ಣನಿಗೆ ಪ್ರಚೋದನೆ ನೀಡುತ್ತಿದ್ದನಂತೆ. ಈ ಹಿನ್ನಲೆಯಲ್ಲಿ ಆತನನ್ನು ಮೈದಾನವೊಂದಕ್ಕೆ ಕರೆದು ಆತನ ಮೇಲೆ ಹಲ್ಲೆ ಮಾಡಿ ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಅತ್ತಿಗೆ ಹಾಗೂ ಆಕೆಯ ಪ್ರೇಮಿ ಸೇರಿ ಮೂವರನ್ನು ಬಂಧಿಸಿದ್ದಾರೆ.