ನವದೆಹಲಿ : ಶಿವಸೇನೆಯ ವಕ್ತಾರ ಸಂಜಯ್ ರಾವತ್ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಅಘೋರಿಗಳಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ ಸಿಪಿ ನಾಯಕರನ್ನು ಸೆಳೆದು ದಿಢೀರ್ ಸರ್ಕಾರ ನಿರ್ಮಾಣ ಮಾಡಿದ ಬಿಜೆಪಿ ಇದೀಗ ಅಧಿಕಾರ ಕಳೆದುಕೊಂಡಿದೆ. ಹಾಗೇ ಎನ್ ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಸೇರಿ ಇದೀಗ ಸರ್ಕಾರ ರಚನೆ ಮಾಡಲಿದ್ದು, ನವೆಂಬರ್ 28 ರಂದು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ಸಂಜಯ್ ರಾವತ್ , ನಮ್ಮ ಮಿಷನ್ ಪೂರ್ಣಗೊಂಡಿದೆ. ಮಹಾರಾಷ್ಟ್ರದಿಂದಲ್ಲೇ ದೇಶದಲ್ಲಿ ಪರಿವರ್ತನೆ ಆರಂಭವಾಗಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡೋ ಅಘೋರಿಗಳಿಗೆ ತಕ್ಕ ಪಾಠ. ಬಿಜೆಪಿ ಏನೇ ಮಾಡಲಿ, ಮಹಾರಾಷ್ಟ್ರ ಯಾರಿಗೂ ಬಗ್ಗೋದಿಲ್ಲ ಎಂದು ಹೇಳಿದ್ದಾರೆ.