ಹೈದರಾಬಾದ್ : 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಸಂಬಂಧಿಯೊಬ್ಬ ಅದನ್ನು ವಿಡಿಯೋ ಮಾಡಿ ಬೆದರಿಸಿ ತನ್ನ ಸ್ನೇಹಿತರ ಜೊತೆ ಸೇರಿ ಮತ್ತೆ 4 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
4 ವರ್ಷಗಳ ಹಿಂದೆ ಬಾಲಕಿಯ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್ನಲ್ಲಿ ಮತ್ತು ಬರುವ ಔಷಧ ಬೆರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ಮತ್ತೆ ಆಕೆಯ ಮೇಲೆ 4 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ.
ಅವರ ಕಿರುಕುಳ ತಾಳಲಾರದೆ ಸಂತ್ರಸ್ತೆ ಹೈದರಾಬಾದ್ ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಪ್ರತಿಭಟನೆ ಮಾಡಿ ಇದರಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.