ನವದೆಹಲಿ : ಭ್ರಷ್ಟಾಚಾರದ ವಿರುದ್ಧ ರಚನೆಯಾಗಿರುವ ಲೋಕ್ ಪಾಲ್ ಸಂಸ್ಥೆಗೆ ಉತ್ತಮವಾದ ಲೋಗೋ(ಲಾಂಛನ) ಮತ್ತು ಮೋಟೋ(ಧ್ಯೇಯವಾಕ್ಯ) ಬೇಕಾಗಿದ್ದು, ಅದಕ್ಕಾಗಿ ಜನತೆಗೆ ಆಫರ್ ವೊಂದನ್ನು ನೀಡಿದೆ.
ಧ್ಯೇಯವಾಕ್ಯ ಆಕರ್ಷಕವಾಗಿರಬೇಕು, ನಾಲ್ಕೈದು ಪದಗಳಿಗಿಂತ ಜಾಸ್ತಿ ಇರಬಾರದು ಹಾಗೂ ಹಿಂದಿ, ಸಂಸ್ಕೃತ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇರಬಹುದು ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಆಯ್ಕೆಯಾದ ಲೋಗೋಗೆ ಸಂಸ್ಥೆ 25 ಸಾವಿರ ರೂ. ಬಹುಮಾನವನ್ನೂ ನೀಡುವುದಾಗಿ ಹೇಳಿದೆ.
ಈಗಾಗಲೇ 1,239 ಮಂದಿ ಧ್ಯೇಯವಾಕ್ಯ ಹಾಗೂ 365 ಮಂದಿ ಲಾಂಛನಗಳನ್ನು ಕಳಿಸಿದ್ದು, ಆಸಕ್ತರಿಗೆ ಇನ್ನೂ ಜೂನ್ 13ರ ವರೆಗೆ ಸಮಯವಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.