Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಂದೆ ತಾಯಿಯ ಮೇಲೆ ದೌರ್ಜನ್ಯ ಎಸಗುವವರಿಗೆ ಹೈಕೋರ್ಟ್ ನೀಡಿದೆ ಬಿಗ್ ಶಾಕ್

ತಂದೆ ತಾಯಿಯ ಮೇಲೆ ದೌರ್ಜನ್ಯ ಎಸಗುವವರಿಗೆ ಹೈಕೋರ್ಟ್ ನೀಡಿದೆ ಬಿಗ್ ಶಾಕ್
ಮುಂಬೈ , ಮಂಗಳವಾರ, 17 ಜುಲೈ 2018 (12:07 IST)
ಮುಂಬೈ : ಹಿರಿಯ ನಾಗರಿಕರ ಪಾಲನೆ ಪೋಷಣೆಯ ವಿಚಾರಕ್ಕೆ  ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪುವೊಂದನ್ನು  ನೀಡಿದೆ.


ಈ ಕುರಿತು ವಿಶೇಷ ಕಾನೂನನ್ನು ಉಲ್ಲೇಖಿಸಿರುವ ಕೋರ್ಟ್ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ದೌರ್ಜನ್ಯ ಎಸಗಿದರೆ ಮಗನಿಗೆ ನೀಡಿದ ಆಸ್ತಿಯನ್ನು ತಂದೆ ತಾಯಿ ವಾಪಸ್ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.


ಈ ಹಿಂದೆ ಅಂಧೇರಿಯ ವ್ಯಕ್ತಿಯೊಬ್ಬರ ಪತ್ನಿ ಮೃತಪಟ್ಟಿದ್ದ ಸಂದರ್ಭದಲ್ಲಿ  ಮಗ ಮತ್ತು ಸೊಸೆ ಫ್ಲ್ಯಾಟ್ ನ ಅರ್ಧ ಭಾಗವನ್ನು ಪಡೆದುಕೊಂಡಿದ್ದರು. ನಂತರ ಈ ವ್ಯಕ್ತಿ ಮರುಮದುವೆಯಾಗಿದ್ದರು. ಮಗ ಮತ್ತು ಸೊಸೆ ಎರಡನೇ ಪತ್ನಿಯನ್ನು ನಿರ್ಲಕ್ಷಿಸಲು ಆರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಅವರು ತಾನು ಮಗನಿಗೆ ಕೊಟ್ಟ ಪಾಲನ್ನು ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆಗ ನ್ಯಾಯಾಲಯ ಆ ವ್ಯಕ್ತಿಯ ಪರವಾಗಿ ತೀರ್ಪು ನೀಡಿದೆ. ಈ ಮೂಲಕ ಕೋರ್ಟ್ ಹಿರಿಯ ನಾಗರಿಕರ ಪಾಲನೆ ಪೋಷಣೆಗೆ ಹೆಚ್ಚಿನ ಮಹತ್ವ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಳೀಯನನ್ನು ಕೊಂದಿದ್ದಕ್ಕೆ ಮೊಸಳೆಗಳ ಮೇಲೆ ಸೇಡು ತೀರಿಸಿಕೊಂಡ ಗ್ರಾಮಸ್ಥರು