Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುಮಗ ಟಾಯ್ಲೆಟ್ ನಲ್ಲಿ ನಿಂತ ಫೋಟೊವನ್ನು ಸರ್ಕಾರಕ್ಕೆ ನೀಡಿದ್ರೆ ವಧುವಿಗೆ ಸಿಗುತ್ತೆ ದುಡ್ಡು!

ಮದುಮಗ ಟಾಯ್ಲೆಟ್ ನಲ್ಲಿ ನಿಂತ ಫೋಟೊವನ್ನು ಸರ್ಕಾರಕ್ಕೆ ನೀಡಿದ್ರೆ ವಧುವಿಗೆ ಸಿಗುತ್ತೆ ದುಡ್ಡು!
ಭೋಪಾಲ್ , ಶುಕ್ರವಾರ, 11 ಅಕ್ಟೋಬರ್ 2019 (09:40 IST)
ಭೋಪಾಲ್ : ಮಧ್ಯಪ್ರದೇಶದಲ್ಲಿ ಮದುವೆಗೂ ಮುನ್ನ ವರನ  ಫೋಟೋವನ್ನು ಕ್ಲಿಕ್ಕಿಸಿದರೆ ವಧುವಿಗೆ ಸರ್ಕಾರದಿಂದ 51 ಸಾವಿರ ರೂಪಾಯಿ ಸಿಗಲಿದೆಯಂತೆ.



ಹೌದು. ಬಹಿರ್ದೆಸೆ ಮುಕ್ತಗೊಳಿಸುವ ಉದ್ದೇಶದಿಂದ ಮದುವೆಯಾಗುವ ಪ್ರತಿಯೊಬ್ಬ ಹುಡುಗನ ಮನೆಯಲ್ಲಿ ಶೌಚಾಲಯ ಇರಬೇಕು ಎಂಬ ಕಾರಣಕ್ಕೆ  ಮಧ್ಯಪ್ರದೇಶ ಸರ್ಕಾರ ಇಂತಹ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.

 

ಕನ್ಯಾ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸುವ ಮದುಮಗಳು ವರನ ಮನೆಯಲ್ಲಿ ಟಾಯ್ಲೆಟ್​ಯಿದೆ ಎಂದು ಸಾಬೀತು ಪಡಿಸಬೇಕು. ಅದಕ್ಕಾಗಿ ಮದುಮಗ ಟಾಯ್ಲೆಟ್​ನಲ್ಲಿ ನಿಂತು ಕ್ಲಿಕ್ಕಿಸಿದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಯುವತಿಗೆ ಈ ಯೋಜನೆಯಡಿ 51 ಸಾವಿರ ರೂಪಾಯಿ ಸರ್ಕಾರ ನೀಡುತ್ತದೆ ಎನ್ನಲಾಗಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ವೇಳೆ ನೀಡಿದ ಆಶ್ವಾಸನೆ ಈಡೇರಿಸದ ಮೇಯರ್ ಗೆ ರೈತರು ಮಾಡಿದ್ದೇನು ಗೊತ್ತಾ?