Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವತಿಯನ್ನು 10 ದಿನಗಳ ಕಾಲ ರೂಂ ನಲ್ಲಿ ಬಂಧಿಸಿ 12ಕ್ಕೂ ಹೆಚ್ಚು ಮಂದಿ ಕಾಮುಕರಿಂದ ಅತ್ಯಾಚಾರ

ಯುವತಿಯನ್ನು 10 ದಿನಗಳ ಕಾಲ ರೂಂ ನಲ್ಲಿ ಬಂಧಿಸಿ 12ಕ್ಕೂ ಹೆಚ್ಚು ಮಂದಿ ಕಾಮುಕರಿಂದ ಅತ್ಯಾಚಾರ
ಪುರಿ , ಶುಕ್ರವಾರ, 19 ಅಕ್ಟೋಬರ್ 2018 (07:30 IST)
ಪುರಿ : ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪ್ರದೇಶದಲ್ಲಿ ಯುವತಿಯೊಬ್ಬಳನ್ನು 12ಕ್ಕೂ ಹೆಚ್ಚು ಮಂದಿ ಕಾಮುಕರು ಸುಮಾರು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ.


ಒಡಿಶಾದಲ್ಲಿ ಪ್ರಸಿದ್ಧ ಸೂರ್ಯ ದೇವಾಲಯದಿಂದ 2 ಕಿಲೋಮೀಟರ್ ದೂರದಲ್ಲಿರುವ ಮಾರ್ಕೆಟ್ ಕಾಂಪ್ಲೆಕ್ಸ್ ನ ಕೊಠಡಿಯೊಂದರಲ್ಲಿ ಯುವತಿಯನ್ನು ಕೂಡಿ ಹಾಕಿ ಈ ಕೃತ್ಯ ಎಸಗಲಾಗಿದೆ. ನಂತರ ಆಕೆ ಕೊಠಡಿಯ ಛಾವಣಿಯ ಮೂಲಕ ಸಹಾಯಕ್ಕಾಗಿ ಸ್ಥಳೀಯರ ಬಳಿ ಅಂಗಲಾಚಿದ್ದಾಳೆ. ಆಗ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಕೋಲ್ಕತ್ತಾ ನಿವಾಸಿಯಾಗಿದ್ದ ಈ ಯುವತಿಗೆ ಕೆಲಸ ಕೊಡಿಸುವುದಾಗಿ ಹುಡುಗಿಯೊಬ್ಬಳು ಆಕೆಯನ್ನು ಒಡಿಶಾಗೆ ಕರೆ ತಂದು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ. ಹಾಗೇ ಆಕೆ ಸುಭಾಷ್, ಕೃಷ್ಣ ಹಾಗೂ ರಾಜು ಮತ್ತಿತರ ಜೊತೆ ಸೇರಿಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಳು ಎಂಬುದಾಗಿ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾತ್ ರೂಂ ಕ್ಲೀನ್ ಮಾಡುತ್ತಿದ್ದ ಕೆಲಸದಾಕೆಗೆ ಸೂಪರ್ ವೈಸರ್ ಮಾಡಿದ್ದೇನು ಗೊತ್ತಾ?