Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವದಲ್ಲೇ ಮೊದಲ ಪ್ರಕರಣ ಭಾರತದಲ್ಲಿ ಪತ್ತೆ !

ವಿಶ್ವದಲ್ಲೇ ಮೊದಲ ಪ್ರಕರಣ ಭಾರತದಲ್ಲಿ ಪತ್ತೆ !
ಕೋಲ್ಕತ್ತಾ , ಬುಧವಾರ, 5 ಏಪ್ರಿಲ್ 2023 (08:30 IST)
ಕೋಲ್ಕತ್ತಾ : ವಿಶ್ವದಲ್ಲೇ ಅಪರೂಪದ ಮಾರಕ ಸಸ್ಯ ಶಿಲೀಂಧ್ರ ಸೋಂಕಿಗೆ ಕೋಲ್ಕತ್ತಾದ ವ್ಯಕ್ತಿ ತುತ್ತಾಗಿದ್ದು, ದೇಶದಲ್ಲಿ ಆತಂಕ ಮೂಡಿಸಿದೆ. ವಿಶ್ವದಲ್ಲೇ ಸೋಂಕು ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ.
 
61 ವಯಸ್ಸಿನ ವ್ಯಕ್ತಿ ಈ ಸೋಂಕಿ ಒಳಗಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಕರ್ಕಶ ಧ್ವನಿ, ಕೆಮ್ಮು, ಆಯಾಸ, ಗಂಟಲಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾದಾಗ ಸೋಂಕು ಇರುವುದು ದೃಢಪಟ್ಟಿದೆ. 

ವ್ಯಕ್ತಿಯು ಮಧುಮೇಹ, ಹೆಚ್ಐವಿ ಸೋಂಕು, ಮೂತ್ರಪಿಂಡದ ಕಾಯಿಲೆ, ಯಾವುದೇ ದೀರ್ಘಕಾಲದ ಕಾಯಿಲೆ, ಇಮ್ಯುನೊಸಪ್ರೆಸಿವ್ ಡ್ರಗ್ ಸೇವನೆ ಅಥವಾ ಆಘಾತದ ಇತಿಹಾಸವನ್ನು ಹೊಂದಿರಲಿಲ್ಲ.

ರೋಗಿ, ವೃತ್ತಿಯಲ್ಲಿ ಸಸ್ಯ ಮೈಕೊಲೊಜಿಸ್ಟ್ ಆಗಿದ್ದಾರೆ. ದೀರ್ಘಕಾಲದವರೆಗೆ ಕೊಳೆಯುತ್ತಿರುವ ವಸ್ತುಗಳು, ಅಣಬೆಗಳು ಮತ್ತು ವಿವಿಧ ಸಸ್ಯ ಶಿಲೀಂಧ್ರಗಳನ್ನು ತನ್ನ ಸಂಶೋಧನಾ ಚಟುವಟಿಕೆಗಳ ಭಾಗವಾಗಿ ಬಳಸಿಕೊಂಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಂಜಾನ್ ಸಂದರ್ಭದಲ್ಲಿ ಸಂಗೀತ ನಿಷೇಧ !