Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಗುವನ್ನು 3ನೇ ಅಂತಸ್ತಿನಿಂದ ಬಿಸಾಕಿ ತಾನು ಜಿಗಿದ ತಂದೆ?

ಮಗುವನ್ನು 3ನೇ ಅಂತಸ್ತಿನಿಂದ ಬಿಸಾಕಿ ತಾನು ಜಿಗಿದ ತಂದೆ?
ನವದೆಹಲಿ , ಭಾನುವಾರ, 18 ಡಿಸೆಂಬರ್ 2022 (11:12 IST)
ನವದೆಹಲಿ : ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿದ ನಂತರ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು ಮನೆಯ 3ನೇ ಅಂತಸ್ತಿನಿಂದ ಎಸೆದು ತಾನು ಅಲ್ಲಿಂದ ಜಿಗಿದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ನವದೆಹಲಿಯ ಕಲ್ಕಾಜಿಯ ಕೊಳೆಗೇರಿಯ ಮನೆಯ ಮೂರನೇ ಅಂತಸ್ತಿನ ಬಾಲ್ಕನಿಯಲ್ಲಿ ಈ ಘಟನೆ ನಡೆದಿದೆ. ಮಾನ್ಸಿಂಗ್ ಕೆಳಗೆ ಜಿಗಿದ ವ್ಯಕ್ತಿ.

ಈತ ತನ್ನ ಪತ್ನಿ ಪೂಜಾಳೊಂದಿಗೆ ಕಳೆದ ಕೆಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಪೂಜಾ ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು.

ಕಳೆದ ರಾತ್ರಿ ಪೂಜಾಳನ್ನು ಭೇಟಿಯಾಗಲು ಮಾನ್ ಸಿಂಗ್ ಬಂದಿದ್ದ. ಈ ವೇಳೆ ಮತ್ತೆ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಈ ವೇಳೆ ಮಾನ್ ಸಿಂಗ್ ಕೋಪದಲ್ಲಿ ಅಲ್ಲೇ ಇದ್ದ ತನ್ನ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾನೆ. ಅದಾದ ಬಳಿಕ ತಾನು ಅಲ್ಲಿಂದ ಹಾರಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ತಂದೆ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯ 3ನೇ ಕವನ ಸಂಕಲನ ಬಿಡುಗಡೆ ಮಾಡಿದ ಗೆಹ್ಲೋಟ್