ಲಕ್ಷ್ಮೀಘಾಟ್ ಎಂಬ ಹಳ್ಳಿಯ ನಿವಾಸಿಯಾಗಿರುವ 65 ವರ್ಷದ ವೃದ್ಧ ಗೇನು ಚೌಧರಿ ಬೋಟ್ ದುರಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ತನ್ನ ಮಗಳನ್ನಾತ 15 ವರ್ಷಗಳ ಹಿಂದೆ ವಿವಾಹ ಮಾಡಿ ಕಳುಹಿಸಿದ್ದ. ಇಬ್ಬರು ಮಕ್ಕಳ ತಾಯಿಯಾಗಿರುವ ಆತನ 35 ವರ್ಷದ ಮಗಳು ಗಂಡನನ್ನು ತೊರೆದು ಇತ್ತೀಚಿಗೆ ಮರಳಿ ಬಂದು ತನ್ನ ತಂದೆ-ತಾಯಿಗಳ ಜತೆ ವಾಸಿಸತೊಡಗಿದ್ದಳು.
ಅತ್ಯಾಚಾರಕ್ಕೊಳಗಾಗುತ್ತಿದ್ದ ತನ್ನ ಮಗಳನ್ನು ರಕ್ಷಿಸಲು ಹೋದ ತಂದೆ ತೀವೃ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಮಾಲ್ಡಾದಲ್ಲಿ ನಡೆದಿದೆ. ಪೀಡಿತನ ತಲೆಗೆ 15 ಹೊಲಿಗೆಗಳನ್ನು ಹಾಕಲಾಗಿದೆ. ಆತನ ಕಣ್ಣಿಗೆ ಆರೋಪಿ ಕಬ್ಬಿಣದ ರಾಡ್ ಹಾಕಿ ಚುಚ್ಚಿದ್ದಾನೆ. ಆದ್ದರಿಂದ ಆತಬಲಗಣ್ಣು ಕಳೆದುಕೊಳ್ಳುವ ಅಪಾಯ ಎದುರಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕೆಯನ್ನು ಕಂಡಾಗೆಲ್ಲ ಪಕ್ಕದ ಮನೆಯ ನಿವಾಸಿ ರಿಂಟು ಶೇಖ್ ಅಶ್ಲೀಲ ಕಮೆಂಟ್ ಮಾಡುತ್ತಿದ್ದ ಮತ್ತು ಅಸಭ್ಯ ಪ್ರಸ್ತಾಪಗಳನ್ನು ಆಕೆಯ ಮುಂದಿಡುತ್ತಿದ್ದ. ಈ ರೀತಿಯ ದುರ್ವರ್ತನೆಗಳನ್ನು ಪುನರಾವರ್ತಿಸದಂತೆ ಸ್ಥಳೀಯ ಕಾಂಗರೂ ಕೋರ್ಟ್ ಆತನಿಗೆ ಎಚ್ಚರಿಕೆ ನೀಡಿತ್ತು.
ತನ್ನ ಕೆಟ್ಟ ವರ್ತನೆಯನ್ನು ನಿಲ್ಲಿಸುವ ಬದಲು ರಿಂಟು ಶೇಖ್ ಊರ ತುಂಬೆಲ್ಲ ಆಕೆಯ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಓಡಾಡಿದ. ಆದ್ದರಿಂದ ತಂದೆ- ಮಗಳು ಇಂಗ್ಲೀಷ್ ಬಾಜಾರ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದರು.
ಆದರೆ ಪೊಲೀಸರು ಆತನ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ. ಆರೋಪಿ ರಿಂಟು ತನ್ನ ಮೇಲೆ ನೀಡಿರುವ ದೂರನ್ನು ಹಿಂಪಡೆಯುವಂತೆ ಪೀಡಿತಳ ಕುಟುಂಬದ ಮೇಲೆ ಒತ್ತಡ ಹೇರತೊಡಗಿದ.
ಒಂದು ದಿನ ಮಹಿಳೆಯ ಮನೆಗೆ ಹೋದ ಶೇಖ್ ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ. ಆದರೆ ಅಷ್ಟರಲ್ಲಿ ಅವಳ ತಂದೆ ಬಂದು ಆತನನ್ನು ತಡೆದ. ವೃದ್ಧನ ಮೇಲೆ ದಾಳಿ ನಡೆಸಿದ ಆತ ಕಬ್ಬಿಣದ ಸರಳನ್ನು ಆತನ ಕಣ್ಣಿಗೆ ಚುಚ್ಚಿದ. ಮಹಿಳೆಯ ಕೂಗನ್ನು ಕೇಳಿಸಿಕೊಂಡ ಸ್ಥಳೀಯರು ಓಡಿ ಬಂದು ವೃದ್ಧನನ್ನು ಆಸ್ಪತ್ರೆಗೆ ಸಾಗಿಸಿದರು.
ಪೀಡಿತನಿಗೆ ಚಿಕಿತ್ಸೆ ನೀಡಿರುವ ವೈದ್ಯರು ಆತ ತನ್ನ ದೃಷ್ಟಿ ಮರಳಿ ಪಡೆಯುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ.