Webdunia - Bharat's app for daily news and videos

Install App

ಕೆನೆಪದರ ಗುರುತಿಸಲು ಆರ್ಥಿಕ ಮಾನದಂಡ ಮಾತ್ರವೇ ಏಕೈಕ ಆಧಾರವಲ್ಲ: ಸುಪ್ರೀಂಕೋರ್ಟ್

Webdunia
ಗುರುವಾರ, 26 ಆಗಸ್ಟ್ 2021 (09:23 IST)
ಹೊಸದಿಲ್ಲಿ,ಆ.25: ಹಿಂದುಳಿದ ವರ್ಗಗಳಲ್ಲಿ ಕೆನೆಪದರವನ್ನು ಗುರುತಿಸಲು ಆರ್ಥಿಕ ಮಾನದಂಡವೊಂದೇ ಏಕೈಕ ಆಧಾರವಲ್ಲವೆಂದು ಸುಪ್ರೀಂಕೋರ್ಟ್ ಮಂಗಳವಾರ ಪ್ರತಿಪಾದಿಸಿರುವುದಾಗಿ ಕಾನೂನುಸುದ್ದಿಜಾಲತಾಣ 'ಬಾರ್ ಆಯಂಡ್ ಬೆಂಚ್' ವರದಿ ಮಾಡಿದೆ.

ಹರ್ಯಾಣ ಸರಕಾರ ಹೊರಡಿಸಿರುವ ಹಿಂದುಳಿದ ವರ್ಗಗಳಲ್ಲಿ ಕೆನೆಪದರವನ್ನು ನಿರ್ಧರಿಸುವ ಮಾನದಂಡಗಳನ್ನು ವಿವರಿಸುವ ಅಧಿಸೂಚನೆಯನ್ನು ಕೂಡಾ ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಓಬಿಸಿ ಸಮುದಾಯದಲ್ಲಿ ಉತ್ತಮ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ಹೊಂದಿರುವ ಜಾತಿಗಳ ಸದಸ್ಯರನ್ನು ಕೆನೆಪದರವೆಂದು ಗುರುತಿಸಲಾಗುತ್ತಿದೆ. ಕೆನೆಪದರವೆಂದು ಗುರುತಿಸಲಾದವರು ಶೈಕ್ಷಣಿಕ ಕಾರ್ಯಕ್ರಮದಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಅರ್ಹರಾಗುವುದಿಲ್ಲ.
2016ರಲ್ಲಿ ಹೊರಡಿಸಲಾದ ಅಧಿಸೂಚನೆಯಡಿ ಹರ್ಯಾಣ ಹಿಂದುಳಿದ ವರ್ಗಗಳ (ಸರಕಾರಿ ಸೇವೆಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಾತಿ) ಕಾಯ್ದೆಯಡಿ 3 ಲಕ್ಷ ರೂ.ಗಿಂತ ಅಧಿಕ ವಾರ್ಷಿಕ ಆದಾಯವನ್ನು ಹೊಂದಿರುವ ಪೌರರ ಮಕ್ಕಳು ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಆದ್ಯತೆಯನ್ನು ನೀಡಲಾಗುತ್ತಿದೆ. ಉಳಿದ ಮೀಸಲಾತಿ ಸೀಟುಗಳು ವಾರ್ಷಿಕವಾಗಿ 3 ಲಕ್ಷ ರೂ.ಗಿಂತ ಅಧಿಕ ಹಾಗೂ 6 ಲಕ್ಷ ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿರುವವರ ಮಕ್ಕಳಿಗೆ ಲಭ್ಯವಾಗಲಿದೆ.
ಇದೇ ವಿಚಾರವಾಗಿ ಹರ್ಯಾಣ ಸರಕಾರವು 2018ರಲ್ಲಿ ಇನ್ನೊಂದು ಅಧಿಸೂಚನೆಯನ್ನು ಹೊರಡಿಸಿತ್ತು. ಕೆನೆಪದರ ರಹಿತ ವಲಯದಲ್ಲಿ ಉಪವರ್ಗೀಕರಣವನ್ನು ಸೃಷ್ಟಿಸುವ ಸರಕಾರದ ಅಧಿಸೂಚನೆಯು ಅಸಾಂವಿಧಾನಿಕವೆಂದು ಪಂಜಾಬ್ ಹಾಗೂ ಹರ್ಯಾಣ ನ್ಯಾಯಾಲಯ ಪ್ರತಿಪಾದಿಸಿದೆ. ಈ ವರ್ಗೀಕರಣಗಳನ್ನು ಸಮರ್ಥಿಸುವಂತಹ ಯಾವುದೇ ದತ್ತಾಂಶಗಳನ್ನು ಒದಗಿಸಲಾಗಿಲ್ಲವೆಂದು ಅದು ಹೇಳಿದೆ. ಈ ವಿಷಯವಾಗಿ ಹೈಕೋರ್ಟ್, ಸುಪ್ರೀಂಕೋರ್ಟ್ಗೆ ಮನವಿಯನ್ನು ಸಲ್ಲಿಸಿತ್ತೆಂದು ಬಾರ್ ಆಯಂಡ್ ಬೆಂಚ್ ವರದಿ ಮಾಡಿದೆ.
ಸುಪ್ರೀಂಕೋಟ್ ನ ಈ ಅಧಿಸೂಚನೆಯನ್ನು ಹರ್ಯಾಣದ ಪಿಚ್ರಾ ವರ್ಗ್ (ಹಿಂದುಳಿದ ವರ್ಗ) ಕಲ್ಯಾಣ ಮಹಾಸಭಾ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಕೆನೆಪದರದಿಂದ ವ್ಯಕ್ತಿಯ ಹೊರಪಡಿಸುವಿಕೆ ಅಥವಾ ಗುರುತಿಸುವಿಕೆಯ ಮಾನದಂಡವನ್ನು ನಿಗದಿಪಡಿಸಲು ಆರ್ಥಿಕತೆಯಲ್ಲದೆ ಇತರ ಅಂಶಗಳನ್ನೂ ಪರಿಗಣಿಸಬೇಕಾದ ಅಗತ್ಯವಿದೆಯೆಂದು ಅದು ಮನವಿ ಮಾಡಿತ್ತು.ಅರ್ಜಿಯ ಆಲಿಕೆಯ ಸಂದರ್ಭ ಸುಪ್ರೀಂಕೋರ್ಟ್ ನ್ಯಾಯಪೀಠವು, ಹಿಂದುಳಿದವರ್ಗಗಳಿಗೆ ಸೇರಿದ ಕೆನೆಪದರವನ್ನು ನಿರ್ಧರಿಸುವ ಮಾನದಂಡವಾದ ಇಂದಿರಾ ಸಾಹ್ನಿ ವರ್ಸಸ್ ಕೇಂದ್ರ ಸರಕಾರದ ಪ್ರಕರಣವನ್ನು ಉಲ್ಲೇಖಿಸಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments