ನವದೆಹಲಿ : ದಂಪತಿಗಳು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿ ತೀರ್ಪು ಬರುವ ಮೊದಲೆ ಅವರು ಎರಡನೇ ಮದುವೆಯಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಹಿಂದೆ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿ ತೀರ್ಪು ಬರುವವರೆಗೂ ಕಾಯದೆ ದಂಪತಿಗಳು ಎರಡನೇ ಮದುವೆಯಾದರೆ ಅದು ಅಸಿಂಧು ಎಂದು ಹೇಳಲಾಗುತ್ತಿತ್ತು.
ಆದರೆ ಈಗ ಕೌಟುಂಬಿಕ ಕೋರ್ಟ್ಗಳು ನೀಡಿರುವ ಆದೇಶ ಪ್ರಶ್ನಿಸಿ ಪತಿ ಅಥವಾ ಪತ್ನಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಾಕಿಯಿದ್ದರೂ, ಮೊದಲ ಮದುವೆಯ ದಂಪತಿಗಳ ನಡುವೆ ಪರಸ್ಪರ ಒಪ್ಪಿಗೆ ಇದ್ದು, ಈ ಕುರಿತು ಹೈಕೋರ್ಟ್ಗೆ ಲಿಖಿತ ಮಾಹಿತಿ ನೀಡಿದರೆ ಸಾಕು ಅವರು ಎರಡನೇ ಮದುವೆಯಾಗಬಹುದು. ಕೇಸಿನ ಅಂತಿಮ ತೀರ್ಪು ಬರುವವರೆಗೆ ಕಾಯಬೇಕಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ