ನವದೆಹಲಿ : ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ಈಗ ಬ್ಯಾನ್ ಆಗಿದ್ದ 59 ಆ್ಯಪ್ ಬಗ್ಗೆ 79 ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುವಂತೆ ಚೀನೀ ಕಂಪೆನಿಗಳಿಗೆ ಸೂಚಿಸಿದೆ.
ಭಾರತೀಯರ ಮಾಹಿತಿ ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಚೀನಾದ 59 ಮೊಬೈಲ್ ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಆದರೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಬ್ಯಾನ್ ಆದ 59 ಆ್ಯಪ್ ಕಂಪೆನಿಗಳಿಗೆ , ಕಂಪೆನಿಯ ಮೂಲ? ಕಂಪೆನಿಯ ರಚನೆ? ಕಂಪೆನಿಯ ಹೂಡಿಕೆದಾರರು? ದತ್ತಾಂಶ ನಿರ್ವಹಣೆ ಮತ್ತು ಸರ್ವರ್ ಗಳ ಕುರಿತು 79 ಪ್ರಶ್ನೆಗಳನ್ನು ಸಿದ್ಧಪಡಿಸಿ ಜುಲೈ 22ರ ಒಳಗಡೆ ಉತ್ತರಿಸುವಂತೆ, ಇಲ್ಲವಾದರೆ ಸಂಪೂರ್ಣವಾಗಿ ಬ್ಯಾನ್ ಮಾಡುವುದಾಗಿ ವಾರ್ನ್ ಮಾಡಿದೆ.