ನವದೆಹಲಿ : ಭ್ರಷ್ಟಾಚಾರ ನಿಗ್ರಹ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರ, ಈ ನಿಟ್ಟಿನಲ್ಲಿ 2018ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಆ ಮೂಲಕ ಸರ್ಕಾರಿ ಕೆಲಸ ಮಾಡಿಕೊಡುವುದಕ್ಕಾಗಿ ಲೈಂಗಿಕ ಸಹಕಾರಕ್ಕೆ ಕೋರಿಕೆ ಸಲ್ಲಿಸುವುದು ಅಥವಾ ಅದನ್ನು ಒಪ್ಪಿಕೊಳ್ಳುವುದು ಲಂಚ ನೀಡಿದಂತೆ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಕೆಲಸಗಳನ್ನು ಮಾಡಿಕೊಡುವ ಸಿಬ್ಬಂದಿಯು, ತನ್ನ ಕಾರ್ಯಕ್ಕೆ ಪ್ರತಿಯಾಗಿ ಯಾವುದೇ ಉಡುಗೊರೆ ಪಡೆಯುವುದು, ದುಬಾರಿ ಕ್ಲಬ್‌ಗಳ ಸದಸ್ಯತ್ವ ಪಡೆಯುವುದು ಅಥವಾ ವಿಶೇಷ ಆದರಣೆಯನ್ನು ಸ್ವೀಕರಿಸುವುದೂ ಸಹ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದರಲ್ಲಿ ಲೈಂಗಿಕ ಸಹಕಾರ ಅಪೇಕ್ಷೆ ಕೂಡಾ ಸೇರಿದೆ.
ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐಯಂತಹ ತನಿಖಾ ಸಂಸ್ಥೆಗಳು ಇನ್ನು ಮುಂದೆ ಲೈಂಗಿಕ ಸಹಕಾರ ಅಪೇಕ್ಷಿಸುವ ಅಧಿಕಾರಿಗಳ ಅಥವಾ ದುಬಾರಿ ಕೊಡುಗೆ ಬಯಸುವ ಅಧಿಕಾರಿಗಳನ್ನೂ ಈ ಕಾಯ್ದೆಯಡಿ ವಿಚಾರಣೆ ನಡೆಸಿ ಗರಿಷ್ಟ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.