ಗುಜರಾತ್ : ಮದುವೆಯಲ್ಲಿ ಗಂಡು ಹೆಣ್ಣನ್ನು ಮದುವೆಯಾಗುವುದನ್ನು ನಾವು ಕಂಡಿರುತ್ತೇವೆ. ಆದರೆ ಗುಜರಾತ್ ನ ಕೆಲ ಗ್ರಾಮಗಳಲ್ಲಿ ಮದುವೆಯ ಬಗ್ಗೆ ಕೆಲ ಬುಡಕಟ್ಟು ಜನಾಂಗದವರು ಪಾಲಿಸುವ ಸಂಪ್ರದಾಯವನ್ನು ಕೇಳಿದರೆ ಅಚ್ಚರಿಯಾಗುತ್ತದೆ.
ಹೌದು. ಮದುವೆಯಂದು ವರ ವಧುವನ್ನು ಬರಿಸುವ ಬದಲು ಗಂಡಿನ ತಂಗಿ ಮದುಮಗಳನ್ನು ಮದುವೆಯಾಗುತ್ತಾರಂತೆ. ಮದುವೆ ಗಂಡು ತನ್ನ ತಾಯಿಯ ಜತೆ ತನ್ನ ಮನೆಯಲ್ಲೇ ಇರುತ್ತಾರೆ. ಇನ್ನು, ಆತನ ತಂಗಿ ಅಥವಾ ಅವರ ಕುಟುಂಬದ ಇತರೆ ಮದುವೆಯಾಗದ ಹುಡುಗಿಯೇ ಮದುವೆ ಗಂಡಾಗಿ ಮಧುಮಗಳನ್ನು ಮದುವೆಯಾಗುತ್ತಾರಂತೆ.
ಈ ವಿಶಿಷ್ಟವಾದ ಸಂಪ್ರದಾಯ ಬುಟ್ಟಕಟ್ಟು ಸಂಸ್ಕೃತಿಯಾಗಿದ್ದು, ಇದನ್ನು ಬಹಳ ಹಿಂದಿನಿಂದಲೂ ಬುಡಕಟ್ಟು ಜನರು ಪಾಲಿಸುತ್ತಿದ್ದರಂತೆ. ಅಲ್ಲದೇ ಮದುವೆ ಗಂಡಿಗೆ ಕೆಟ್ಟದು ಸಂಭವಿಸಬಾರದೆಂದು ಈ ರೀತಿ ಮಾಡುತ್ತಾರೆ ಎಂದು ತಿಳಿದುಬಂದಿದೆ.