Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಬರಿಮಲೆ ದೇವಾಲಯಕ್ಕೆ ತೆರಳುವ ಮಹಿಳೆಯರಿಗೆ ವಯಸ್ಸಿನ ದಾಖಲೆ ಕಡ್ಡಾಯ

ಶಬರಿಮಲೆ ದೇವಾಲಯಕ್ಕೆ ತೆರಳುವ ಮಹಿಳೆಯರಿಗೆ ವಯಸ್ಸಿನ ದಾಖಲೆ ಕಡ್ಡಾಯ
ಬೆಂಗಳೂರು , ಶುಕ್ರವಾರ, 5 ಜನವರಿ 2018 (15:45 IST)
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಇನ್ನು ಮುಂದೆ ವಯಸ್ಸಿನ ಅಧಿಕೃತ ದಾಖಲೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಈ ದೇವಾಲಯದಲ್ಲಿ 10 ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ನಿರ್ಬಂಧಗಳನ್ನು ಉಲ್ಲಂಘಿಸಿ ಕೆಲವು ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಲು ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಯಸ್ಸಿನ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ. ಜೊತೆಗೆ ಮಹಿಳೆಯರ ವಯಸ್ಸನ್ನು ಹೊರ ನೋಟದಿಂದ ನಿರ್ಣಯಿಸುವುದು ಕಷ್ಟ, ಅದಕ್ಕಾಗಿ ನಾವು ವಯಸ್ಸಿನ ಪ್ರಮಾಣಪತ್ರಗಳನ್ನು ಪರಿಶೀಲಿಸು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
 
ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ಪರಿಶೀಲನೆ ಸಂದರ್ಭದಲ್ಲಿ ಮಹಿಳೆಯರು ನೀಡಬೇಕು. ಅಧಿಕೃತ ದಾಖಲೆಗಳನ್ನು ತೋರಿಸಿದರೆ ಭಕ್ತಾದಿಗಳು, ಪೊಲೀಸರು ಮತ್ತು ದೇವಸ್ಥಾನದ ಅಧಿಕಾರಿಗಳ ನಡುವಣ ವಾಗ್ವಾದವನ್ನು ತಪ್ಪಿಸಬಹುದು ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್‌ ತಿಳಿಸಿದ್ದಾರೆ.
 
ಪಂಪಾದಲ್ಲೇ ಮಹಿಳಾ ಪೊಲೀಸರು ಮತ್ತು ಟಿಡಿಬಿ ಮಹಿಳಾ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ತಪಾಸಣೆಯ ಬಳಿಕವೇ ಬೆಟ್ಟ ಏರಲು ಅನುಮತಿ ನೀಡಲಾಗುವುದು. ಈ ಬಾರಿ, ನವೆಂಬರ್‌ 15 ರಿಂದ ಇಲ್ಲಿಯವರೆಗೆ ಕನಿಷ್ಠ 260 ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಯಿತು. ಇವರೆಲ್ಲರೂ 10 ರಿಂದ 50 ವರ್ಷ ಒಳಗಿನವರಾಗಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಫ್‌ಐ ನಿಷೇಧದ ಪ್ರಸ್ತಾಪ ಸರ್ಕಾರದ ಮುಂದಿಲ್ಲ– ರಾಮಲಿಂಗಾರೆಡ್ಡಿ