ಬಿಹಾರದ ರೋಹ್ತಾಸ್ ಜಿಲ್ಲೆಯ ರೆದಿಯಾ ಗ್ರಾಮದ ನಿವಾಸಿ ರಾಜ್ಕಾಲೊ ಕುನ್ವಾರ್ ಹಲ್ಲೆಗೆ ಒಳಗಾದ ಮಹಿಳೆ. ನನ್ಹಾಕ್ ರಜ್ವಾರ್, ಉದಯ್ ರಜ್ವಾರ್ ಮತ್ತು ಛತ್ತು ರಜ್ವಾರ್ ಎಂಬವರು ಕೃತ್ಯ ಎಸಗಿದ ಪಾಪಿಗಳು.ಈ ಮೂವರು ರಾತ್ರಿ ಮೊಮ್ಮಕ್ಕಳ ಜೊತೆ ಮಲಗಿದ್ದ ವೃದ್ಧೆಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ವೃದ್ಧೆಯ ನಾಲಿಗೆ ಕತ್ತರಿಸಿ, ಪರಾರಿಯಾಗಿದ್ದಾರೆ.
ಮಕ್ಕಳ ಕೂಗಾಟ ಕೇಳಿ ಮನೆಗೆ ಬಂದ ಸ್ಥಳೀಯರು ರಕ್ತಸ್ರಾವದಿಂದ ಬಳಲುತ್ತಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮೂವರ ವಿರುದ್ಧ ವೃದ್ಧೆಯು ತಿಲೌತು ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ. ಆಕೆಯ ಹಾಗೂ ಮಕ್ಕಳ ಹೇಳಿಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೃದ್ಧೆ ತಮ್ಮ ಮನೆಯ ಮೇಲೆ ವಾಮಾಚಾರ ಪ್ರಯೋಗ ಮಾಡುತ್ತಿದ್ದಾಳೆ ಎಂದು ಶಂಕಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.