Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಗ್ರ ದಾಳಿ : ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ

ಉಗ್ರ ದಾಳಿ : ಅಮೆರಿಕ ಗುಪ್ತಚರ ಸಂಸ್ಥೆಯ ಎಚ್ಚರಿಕೆ
ನವದೆಹಲಿ , ಭಾನುವಾರ, 12 ಮಾರ್ಚ್ 2023 (12:55 IST)
ನವದೆಹಲಿ : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಘರ್ಷಣೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಭಾರತದಲ್ಲಿ ಉಗ್ರಗಾಮಿ ದಾಳಿಯ ಸಾಧ್ಯತೆಯೂ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.
 
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಆಧರಿಸಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಪಾಕಿಸ್ತಾನವು ಭಾರತ ವಿರೋಧಿ ಉಗ್ರಗಾಮಿ ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಸುದೀರ್ಘ ಇತಿಹಾಸವನ್ನು ಹೊಂದಿದೆ.

ಭಾರತ ಸರ್ಕಾರ ಕಾಶ್ಮೀರದ ಮೇಲೆ ಹಿಡಿತ ಹೆಚ್ಚಿಸುತ್ತಿದ್ದು ಇದು ಪಾಕ್ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಭಾರತದ ವಿರೋಧಿ ಉಗ್ರಗಾಮಿ ಗುಂಪುಗಳು ಕಾಶ್ಮೀರದಲ್ಲಿ ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಬೇರೆ ಭಾಗಗಳಲ್ಲೂ ದಾಳಿ ನಡೆಯುವ ಸಂಭವಗಳಿದೆ ಎಂದು ಎಚ್ಚರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರುಗಳಿಗೆ ಚಾಟ್‌ಜಿಪಿಟಿ ಅಳವಡಿಸಲು ಜನರಲ್ ಮೋಟರ್ಸ್ ಚಿಂತನೆ