ನವದೆಹಲಿ: ದೇಶದಲ್ಲಿ ಈಗ 5 ಜಿ ಹವಾ ಶುರುವಾಗಿದೆ. ಟೆಲಿಕಾಂ ಕಂಪನಿಗಳು 5ಜಿ ಸೇವೆ ನೀಡಲು ಸಜ್ಜಾಗಿವೆ.
ರಿಲಯನ್ಸ್ ಜಿಯೊ ಸಂಸ್ಥೆ ಮುಂಬರುವ ದೀಪಾವಳಿ ಹಬ್ಬದಿಂದ ಜನತೆಗೆ ಉಡುಗೊರೆಯಾಗಿ 5ಜಿ ನೆಟ್ ವರ್ಕ್ ಸೇವೆ ಒದಗಿಸುವುದಾಗಿ ಘೋಷಣೆ ಮಾಡಿದೆ.
ಅದೇ ರೀತಿ ಇನ್ನೊಂದು ಪ್ರಮುಖ ಖಾಸಗಿ ನೆಟ್ ವರ್ಕ್ ಸಂಸ್ಥೆಯಾದ ಏರ್ ಟೆಲ್ ಅಕ್ಟೋಬರ್ ಬಳಿಕ 5ಜಿ ಸೇವೆ ಒದಗಿಸಲಿದೆ. ವೊಡಾಫೋನ್ ಸಂಸ್ಥೆ ಕೂಡಾ ಇದೇ ವೇಳೆ 5ಜಿ ಸೇವೆ ಆರಂಭಿಸಲಿದೆ. ಆದರೆ ಬಿಎಸ್ ಎನ್ ಎಲ್ ಮುಂದಿನ ವರ್ಷಕ್ಕೆ 5ಜಿ ಸೇವೆ ಒದಗಿಸುವ ಗುರಿ ಹಾಕಿಕೊಂಡಿದೆ. ಸದ್ಯಕ್ಕೆ ಕೆಲವು ಪ್ರಮುಖ ನಗರಗಳಲ್ಲಿ ಮಾತ್ರ 5ಜಿ ಸೇವೆ ಲಭ್ಯವಾಗಲಿದೆ. ನಂತರ ದೇಶದಾದ್ಯಂತ ವಿಸ್ತರಣೆಯಾಗಲಿದೆ.