ಲಕ್ನೋ: ಪ್ರೀತಿ ವಿರೋಧಿಸಿದ್ದಕ್ಕೆ ಪ್ರೇಮಿ ಜೊತೆ ಸೇರಿಕೊಂಡು 17 ವರ್ಷದ ಅಪ್ರಾಪ್ತ ಯುವತಿ ತನ್ನ ಹೆತ್ತ ತಂದೆ-ತಾಯಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
17 ವರ್ಷದ ಯುವತಿ 20 ವರ್ಷದ ಯುವಕನನನ್ನು ಪ್ರೀತಿಸುತ್ತಿದ್ದಳು. ಆದರೆ ಇವರ ಪ್ರೇಮಕ್ಕೆ ಮನೆಯವರ ವಿರೋಧವಿತ್ತು. ಈ ವಿಚಾರವಾಗಿ ಯುವತಿ ತಂದೆ-ತಾಯಿಯ ಜೊತೆ ಜಗಳವಾಡಿದ್ದಳು. ಮಾರ್ಚ್ 6 ರಂದು ಮೊದಲು ತಂದೆಯ ಕೊಲೆ ನಡೆದಿತ್ತು.
ಇದಾದ ಒಮದು ವಾರದ ಬಳಿಕ ಅಂದರೆ ಮಾರ್ಚ್ 15 ರಂದು ತಾಯಿಯೂ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಮಗಳು ಮತ್ತು ಪ್ರಿಯಕರನ ಕೃತ್ಯ ಬಯಲಾಗಿತ್ತು. ಇದೀಗ ಇಬ್ಬರನ್ನೂ ಬಂಧಿಸಲಾಗಿದೆ.