Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಮಿಳುನಾಡು ರಾಜಕೀಯ ಬಿಕ್ಕಟ್ಟು: ರಾಷ್ಟ್ರಪತಿ ಭೇಟಿಯಾದ ಡಿಎಂಕೆ ನಾಯಕರು

ತಮಿಳುನಾಡು ರಾಜಕೀಯ ಬಿಕ್ಕಟ್ಟು: ರಾಷ್ಟ್ರಪತಿ ಭೇಟಿಯಾದ ಡಿಎಂಕೆ ನಾಯಕರು
ನವದೆಹಲಿ , ಗುರುವಾರ, 31 ಆಗಸ್ಟ್ 2017 (21:03 IST)
ತಮಿಳುನಾಡು ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಡಿಎಂಕೆ ನಾಯಕರು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸರಕಾರಕ್ಕೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣಗಳು ಒಂದಾಗುತ್ತಿದ್ದಂತೆ ಟಿಟಿವಿ ದಿನಕರನ್ ಬಣದಲ್ಲಿ 21 ಶಾಸಕರು ಗುರುತಿಸಿಕೊಂಡಿದ್ದರಿಂದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಆದ್ದರಿಂದ, ಸರಕಾರಕ್ಕೆ ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡಿ ಎಂದು ಡಿಎಂಕೆ ಹಿರಿಯ ನಾಯಕ ಎಂ.ಕೆ.ಸ್ಟಾಲಿನ್ ರಾಷ್ಟ್ರಪತಿಯವರಿಗೆ ಕೋರಿದ್ದಾರೆ.
 
ಡಿಎಂಕೆ ಹಿರಿಯ ನಾಯಕ ಸ್ಟಾಲಿನ್ ಮನವಿಯನ್ನು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ನಾಯಕರು ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
 
ಒಂದು ವೇಳೆ, ರಾಷ್ಟ್ರಪತಿ ಕೋವಿಂದ್ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದ ಮೊರೆಹೋಗುವುದಾಗಿ ಡಿಎಂಕೆ ಮುಖಂಡ ಸ್ಟಾಲಿನ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೆಸಾರ್ಟ್‌ನಲ್ಲಿ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಸಭೆ