ಉದ್ಯೋಗಿಗಳಿಂದ ಹೆಚ್ಚು ಅವಧಿಯ ಕೆಲಸ ಮಾಡಿಸಬಹುದು. ಆದರೆ ಹಾಗೆ ಮಾಡಿದರೆ ಹೆಚ್ಚುವರಿ ರಜೆ ನೀಡಬೇಕು ಎಂಬುದು ಸೇರಿದಂತೆ ಕೇಂದ್ರ ಕಾರ್ಮಿಕ ಇಲಾಖೆಯ ಹೊಸ ಮಾರ್ಗಸೂಚಿ ಜುಲೈ ೧ರಿಂದ ಜಾರಿಗೆ ಬರಲಿದೆ.
ಕೇಂದ್ರ ಕಾರ್ಮಿಕ ಸಚಿವಾಲಯ ಹಲವು ಕಾರ್ಮಿಕ ನಿಯಮಗಳನ್ನು ಜುಲೈ 1ರಿಂದ ಜಾರಿಗೊಳಿಸಲಿದೆ. ಈ ನಿಯಮಗಳ ಪ್ರಕಾರ ಕೆಲಸದ ಅವಧಿ, ಪಿಎಫ್ ಪಾಲು ಮತ್ತು ಉದ್ಯೋಗಿಗಳ ಕೈಗೆ ಬರುವ ವೇತನದ ಮೊತ್ತ ಸೇರಿದಂತೆ ಹಲವು ನಿಯಮಗಳು ಜಾರಿಗೆ ಬರಲಿವೆ.
ಹೊಸ ಮಾರ್ಗಸೂಚಿ ಜಾರಿಗೆ ತರುವ ಉದ್ದೇಶದಿಂದ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿದ್ದು, ಜುಲೈ ೧ರಿಂದ ಈ ನಿಯಮಗಳು ಜಾರಿ ಬರಲಿವೆ.
ಹೊಸ ನಿಯಮದ ಪ್ರಕಾರ ಕಂಪನಿಗಳು ಕೆಲಸದ ಅವಧಿಯಲ್ಲಿ 8-9 ಗಂಟೆಯಿಂದ 12 ಗಂಟೆಗೆ ವಿಸ್ತರಿಸಬಹುದು. ಆದರೆ ಆಗ ವಾರದಲ್ಲಿ ಮೂರು ದಿನ ವಾರದ ರಜೆ ನೀಡಬೇಕಾಗುತ್ತದೆ.
ನೂತನ ವೇತನದ ನಿಯಮದ ಪ್ರಕಾರ ಉದ್ಯೋಗಿಗಳು ಒಟ್ಟಾರೆ ವೇತನದ ಶೇ.೫೦ರಷ್ಟನ್ನು ಮೂಲ ವೇತನ ಎಂದು ಪರಿಗಣಿಸಬೇಕು. ಅಲ್ಲದೇ ಪಿಎಫ್ ಹಂಚಿಕೆಯ ಮೊತ್ತ ಕೂಡ ಉದ್ಯೋಗಿಗಳು ಮತ್ತು ಕಂಪನಿಗಳ ಪ್ರಮಾಣದಲ್ಲಿ ಏರಿಕೆ ಆಗಲಿದೆ.