Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ವಿಗ್ಗಿ, ಝೋಮ್ಯಾಟೋ ಡೆಲಿವರಿಯಲ್ಲಿ ತಾಂತ್ರಿಕ ದೋಷ

ಸ್ವಿಗ್ಗಿ, ಝೋಮ್ಯಾಟೋ ಡೆಲಿವರಿಯಲ್ಲಿ ತಾಂತ್ರಿಕ ದೋಷ
ನವದೆಹಲಿ , ಭಾನುವಾರ, 8 ಮೇ 2022 (12:15 IST)
ಆನ್‌ಲೈನ್‌ ಫುಡ್ ಡೆಲಿವರಿ ದೈತ್ಯ ಸಂಸ್ಥೆಗಳಾದ ಝೊಮ್ಯಾಟೋ ಹಾಗೂ ಸ್ವಿಗ್ಗಿ ಸೇವೆಯಲ್ಲಿ ಬುಧವಾರ ಕೆಲಕಾಲ ವ್ಯತ್ಯಯ ಉಂಟಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

ಆನ್ಲೈನ್ ಸೇವೆ ಒದಗಿಸುವ ಅಮೆಜಾನ್ ವೆಬ್ ಸವೀರ್ಸಸ್ನಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಸ್ವಿಗ್ಗಿ ಹಾಗೂ ಝೊಮ್ಯಾಟೋ ಸೇವೆಯಲ್ಲಿ ವ್ಯತ್ಯಯವಾಗಿತ್ತು.

ಈ ನಡುವೆ ಗ್ರಾಹಕರಿಂದ ಅಸಂಖ್ಯಾತ ದೂರುಗಳು ಕೇಳಿಬಂದ ಬೆನ್ನಲ್ಲೇ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿರುವ ಎರಡೂ ಸಂಸ್ಥೆಗಳು ತಾತ್ಕಾಲಿಕ ದೋಷವನ್ನು ಸರಿಪಡಿಸುತ್ತೇವೆ’ ಎಂದು ಹೇಳಿತ್ತು. ಇದಾದ ಅರ್ಧ ತಾಸಿನಲ್ಲೇ ಈ ದೋಷ ಸರಿಪಡಿಸಿ ಎಂದಿನಂತೆ ಆ್ಯಪ್ ಕಾರಾರಯರಂಭಿಸಿವೆ.

ವಿವಿಧ ಕಂಪನಿಯ ಆಹಾರ ಪದಾರ್ಥಗಳನ್ನು ಮನೆಮನೆಗೆ ವಿತರಿಸುವವರ ವೇತನ ಹೆಚ್ಚಿಸಲು ಆಗ್ರಹಿಸಿ ನಗರದ ಶ್ರೀಗಂಧದ ಕೋಠಿ ಎದುರಿನ ಸ್ವಿಗ್ಗಿ ಇಂಡಿಯಾ ಅಫೀಷಿಯಲ್ ಮುಂದೆ ಕರುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು.

ಕಂಪನಿಯ ಆಹಾರ ವಿತರಕರ ವೇತನ ಹೆಚ್ಚಿಸಬೇಕಾಗಿದ್ದು, ಕಳೆದ ಮೂರು ದಿನಗಳಿಂದಲೂ ನಿಮ್ಮ ವಿತರಕರು ಮನವಿ ಮಾಡುತ್ತಿದ್ದರೂ ಸ್ಪಂದಿಸಿರುವುದಿಲ್ಲ.

ನಮ್ಮ ಹೋರಾಟಕ್ಕೆ ಪ್ರತಿಕ್ರಿಯೆ ದೊರಕದಿದ್ದರೆ ನ್ಯಾಯ ಸಿಗದಿದ್ದರೇ ಕರುನಾಡ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡುವ ಜೊತೆಗೆ ನಿಮ್ಮ ವ್ಯವಹಾರವನ್ನು ತಡೆ ಮಾಡಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಊಟ ಸೇವಿಸಿ ಸಾಕಷ್ಟು ಅಸ್ವಸ್ಥ !