ನವದೆಹಲಿ: ವಾಹನ ಸವಾರರಿಗೆ ಒಂದು ತಿಂಗಳ ನಂತರ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 20 ಪೈಸೆಯಷ್ಟು ಕಡಿತ ಮಾಡಲಾಗಿದೆ. ಅದೇ ರೀತಿ ಡೀಸೆಲ್ ಬೆಲೆ ಕೂಡ 20 ಪೈಸೆಯಷ್ಟು ಕಡಿಮೆಯಾಗಿದೆ. ಆಗಸ್ಟ್ 22 ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಕಡಿತ ಮಾಡಲಾಗಿದೆ.
ಭಾನುವಾರ ಪೆಟ್ರೋಲ್ ಬೆಲೆ ಲೀಟರ್ಗೆ 15 ರಿಂದ 20 ಪೈಸೆ, ಡೀಸೆಲ್ ದರ 18 ರಿಂದ 20 ಪೈಸೆಗಳಷ್ಟು ಕಡಿಮೆಯಾಗಿದೆ. 2021 ರ ಆಗಸ್ಟ್ 22 ರ ನಂತರದಲ್ಲಿ ದೇಶದಾದ್ಯಂತ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ.
ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 101.64 ರೂಪಾಯಿಯಾಗಿದ್ದು, ಡೀಸೆಲ್ಗೆ ಲೀಟರ್ಗೆ 89.07 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ಗೆ 107.66 ರೂ. ಮತ್ತು ಡೀಸೆಲ್ಗೆ ಲೀಟರ್ಗೆ 96.64 ರೂ. ದರ ಇದೆ. ಬೆಂಗಳೂರಲ್ಲಿ ಪೆಟ್ರೋಲ್ 105 ರೂ., ಡೀಸೆಲ್ 94.29 ರೂ ಇದೆ.
ಪ್ರಮುಖ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಲ್ಲಿ ಅಸೆಂಬ್ಲಿ ಚುನಾವಣೆಯ ನಂತರ ಮೇ 4 ರಿಂದ ಇಂಧನ ಬೆಲೆಗಳು ದೇಶದಲ್ಲಿ ಭಾರೀ ಹೆಚ್ಚಳ ಕಂಡಿವೆ. ಮೇ 4 ಮತ್ತು ಜುಲೈ 17 ರ ನಡುವೆ, ಪೆಟ್ರೋಲ್ ಬೆಲೆ ಲೀಟರ್ಗೆ 11.44 ರೂ. ಮತ್ತು ಡೀಸೆಲ್ ದರ ಲೀಟರ್ಗೆ 9.14 ರೂ. ಜಾಸ್ತಿಯಾಗಿದೆ.