ಕಳೆದ ಕೆಲ ದಿನಗಳಲ್ಲಿ ಅನೇಕ ಬಾರಿ ಆಕೆ ತನ್ನ ಮೊಬೈಲ್‌ನಲ್ಲಿರುವ ಸಂದೇಶಗಳನ್ನು ಓದಲು ಪತಿಗೆ ಅನುಮತಿ ನೀಡಿರಲಿಲ್ಲ. ಈ ಕಾರಣಕ್ಕೆ ಆತ ಪತ್ನಿಯ ಮೇಲೆ ಅಸಮಾಧಾನಗೊಂಡಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
30 ವರ್ಷದ ಪತ್ನಿಯನ್ನು ಆಕೆಯ ಪತಿ ಎರಡು ಅಂತಸ್ತಿನ ಬಂಗಲೆಯ ಮೇಲಿಂದ ಕೆಳಕ್ಕೆ ತಳ್ಳಿದ್ದಾನೆ. ಆಶ್ಚರ್ಯಕರ ವಿಷಯವೆಂದರೆ ಕೆಳಕ್ಕೆ ದೂಡಿದ್ದ ಪತಿ ಆನಂದ್ ಗಾಯಾಳು ದೀಪಮಾಲಾಳನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ.ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಲಸುದಿಯಾ ಪೊಲೀಸ್ ಠಾಣೆಯ ಅಧಿಕಾರಿಗಳ ಬಳಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಬಳಿ ಆತ ಹೇಳಿಕೆ ನೀಡಿದ್ದಾನೆ.
ತನ್ನ ಮೊಬೈಲ್ ಚೆಕ್ ಮಾಡಲು ಅವಕಾಶ ನೀಡದ ಪತ್ನಿಯ ಮೇಲೆ ಕೋಪಗೊಂಡ ಪತಿ ಮಹಾಶಯನೊಬ್ಬ ಆಕೆಯನ್ನು ಎರಡಂತಸ್ತಿನ ಬಂಗಲೆಯ ಮೇಲಿಂದ ಕೆಳಕ್ಕೆ ತಳ್ಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತೀವೃ ಗಾಯಗೊಂಡಿರುವ ಪತ್ನಿ ಈಗ ಭೂಪಾಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಪ್ರಜ್ಞೆ ಮರಳಿದ ಬಳಿಕ ದೀಪಮಾಲಾ ತನ್ನ ಪತಿಯೇ ತನ್ನನ್ನು ಕೆಳಕ್ಕೆ ತಳ್ಳಿರುವ ಸತ್ಯವನ್ನು ತಿಳಿಸಿದ್ದಾಳೆ. ದಂಪತಿಗಳು ಕೇವಲ ನಾಲ್ಕು ದಿನಗಳ ಹಿಂದೆ ಆ ಹೊಸ ಬಂಗಲೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.
ಮುಂಜಾನೆಯ ಟೀಯನ್ನು ಮಾಳಿಗೆಯ ಮೇಲೆಯೇ ಕುಡಿಯೋಣ ಎಂದು ಆನಂದ್ ದೀಪಮಾಲಾಳನ್ನು ಆಹ್ವಾನಿಸಿದ. ಮೊಬೈಲ್ ಸಂದೇಶಕ್ಕೆ ಸಂಬಂಧಿಸಿದಂತೆ ಇಬ್ಬರಲ್ಲಿ ವಾಗ್ವಾದ ನಡೆದಿದೆ. ಸಿಟ್ಟಿನ ಭರದಲ್ಲಿ ಆನಂದ್ ಪತ್ನಿಯನ್ನು ಕೆಳಕ್ಕೆ ತಳ್ಳಿದ್ದಾನೆ.
ದೀಪಮಾಲಾಳ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವೃ ಪೆಟ್ಟಾಗಿದೆ. ಲಸುದಿಯಾ ಪೊಲೀಸ್ ಠಾಣಾಧಿಕಾರಿ ಪಿಎಸ್ ರಾನಾವತ್ ಪ್ರಕಾರ ಆರೋಪಿ ಆನಂದ ಶರ್ಮಾ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.