ಪಾಕಿಸ್ತಾನದ ಹುಟ್ಟಡಗಿಸಲು ಯೋಜನೆಯನ್ನು ಎಲ್ಲಿ ರೂಪಿಸಲಾಗಿತ್ತು ಗೊತ್ತೇ? ಅದನ್ನು ಕೇಳಿದರೆ ನೀವು ಒಂದು ಕ್ಷಣ ದಂಗಾಗಿ ಹೋಗುತ್ತಿರಾ. ಹೆಮ್ಮೆ ಪಡುತ್ತಿರಾ.
ಹೌದು ನಿನ್ನೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲಿನ ದಾಳಿಗೆ ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದು ಕನ್ನಡ ನೆಲದಲ್ಲಿ. ಗಡಿಜಿಲ್ಲೆ ಬೆಳಗಾವಿಯ ಕಮಾಂಡೋ ಕ್ಯಾಂಪ್‌ನಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು.
18 ವರ್ಷದಿಂದ 20 ವರ್ಷದೊಳಗಿನ ಕಮಾಂಡೋಗಳಿಗೆ ಕಠಿಣ ತರಬೇತಿ ನೀಡಿ ದಾಳಿ ನಡೆಸಲು ಸಿದ್ಧಗೊಳಿಸಲಾಗಿತ್ತು.
ಶಬ್ಧ ಮಾಡದ 17 ಹೆಲಿಕಾಪ್ಟರ್ ಬಳಸಿ ಟ್ರೈನಿಂಗ್ ನೀಡಲಾಗಿತ್ತು.
ಮತ್ತೀಗ ಇದೇ ಮಾದರಿ ಹೆಲಿಕಾಪ್ಟರ್ ಬಳಸಿ ಪಾಕ್ ಮೇಲೆ ದಾಳಿ ಮಾಡಲಾಗಿದೆ.
ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ 40ಕ್ಕೂ ಹೆಚ್ಚು ಉಗ್ರರು ಮತ್ತು ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಅವರ ಜತೆಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಬಹಿರಂಗ ಪಡಿಸಿದ್ದು ಇದು ದೇಶಾದ್ಯಂತ ಹೊಸ ಸಂಚಲನವನ್ನು ಮೂಡಿಸಿದೆ.
ತಾನು ಆಕ್ರಮಿಸಿಕೊಂಡಿರುವ ನೆಲೆಗೆ ನುಗ್ಗಿ ಭಾರತ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ