ನವದೆಹಲಿ: ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೊಬ್ಬರು ಲೋಕಸಭೆಗೆ ಆಯ್ಕೆಯಾದ ಖುಷಿ ತಂದ ಸುರೇಶ್ ಗೋಪಿಗೆ ಬಿಜೆಪಿ ಹೈಕಮಾಂಡ್ ರಾಜ್ಯ ಖಾತೆ ಸ್ಥಾನ ಮಾನ ನೀಡಿತ್ತು. ಆದರೆ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ಸುರೇಶ್ ಗೋಪಿ ಇಂದು ರಾಜೀನಾಮೆಗೆ ಮುಂದಾಗಿದ್ದಾರೆ.
ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಬೇಕೆಂದು ಎಷ್ಟೋ ಸಂಸದರು ಸರ್ಕಸ್ ಮಾಡುತ್ತಾರೆ. ಅಂತಹದ್ದರಲ್ಲಿ ಸ್ವತಃ ಹೈಕಮಾಂಡ್ ಕರೆದು ಸ್ಥಾನ ಕೊಟ್ಟರೂ ಸುರೇಶ್ ಗೋಪಿ ಸಚಿವ ಸ್ಥಾನವನ್ನೇ ತ್ಯಾಗ ಮಾಡಲು ಮುಂದಾಗಿದ್ದಾರೆ.
ಇದಕ್ಕೆ ಅವರು ಸೂಕ್ತ ಕಾರಣವನ್ನೂ ನೀಡಿದ್ದಾರೆ. ನಾನು ನಮ್ಮ ನಾಯಕರ ಬಳಿ ನನಗೆ ಈ ಸಚಿವ ಸ್ಥಾನ ಬೇಡವೆಂದು ಹೇಳುತ್ತೇನೆ. ಯಾಕೆಂದರೆ ನಾನು ತ್ರಿಶ್ಶೂರ್ ಜನರ ಸಮಸ್ಯೆಗಳಿಗೆ ಕೇವಲ ಒಬ್ಬ ಸಂಸದನಾಗಿ ಕೆಲಸ ಮಾಡಬೇಕಿದೆ. ಅಲ್ಲದೆ, ನಾನು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಅವುಗಳನ್ನು ಮುಗಿಸಬೇಕಿದೆ. ಇವುಗಳ ನಡುವೆ ಸಚಿವ ಸ್ಥಾನದ ಜವಾಬ್ಧಾರಿ ನನಗೆ ಬೇಡ ಎಂದು ಸುರೇಶ್ ಗೋಪಿ ಹೇಳಿದ್ದಾರೆ.