ನವದೆಹಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾಗಿ ಸುಪ್ರೀಂಕೋರ್ಟ್ ವಿಚಾರಣೆ ಪೂರ್ತಿಗೊಳಿಸಿದ್ದು, ಇಂದು ಮಹತ್ವದ ತೀರ್ಪು ಹೊರಬರಲಿದೆ.
ಇಂದು ಮುಖ್ಯ ನ್ಯಾಯಮೂರ್ತಿ ಮೂರು ಪ್ರಮುಖ ವಿಚಾರಗಳ ಕುರಿತಾಗಿ ತೀರ್ಪು ನೀಡಲಿದ್ದಾರೆ. ಅದರಲ್ಲಿ ಮುಖ್ಯವಾದುದು ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬೇಕೋ ಬೇಡವೋ ಎಂಬ ವಿಚಾರ. ನವಂಬರ್ 17 ರಿಂದ ದೇಗುಲ ಮತ್ತೆ ತೆರೆಯಲಿದ್ದು, ಈ ನಿಟ್ಟಿನಲ್ಲಿ ಈ ತೀರ್ಪಿನ ಬಗ್ಗೆ ದೇಶವೇ ಕುತೂಹಲದಿಂದ ಕಾಯುತ್ತಿದೆ.
ಇನ್ನೊಂದೆಡೆ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಕುರಿತಂತೆಯೂ ಇಂದು ತೀರ್ಪು ಹೊರಬರಲಿದೆ. ಅದಲ್ಲದೆ, ರಾಫೇಲ್ ಯುದ್ಧ ವಿಮಾನ ಡೀಲ್ ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಮುಗಿದಿ ಆ ತೀರ್ಪನ್ನೂ ಇಂದು ಮುಖ್ಯ ನ್ಯಾಯಮೂರ್ತಿಗಳು ನೀಡಲಿದ್ದಾರೆ.