Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಕಟಿಸಲಿರುವ ಸುಪ್ರೀಂಕೋರ್ಟ್

ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಕಟಿಸಲಿರುವ ಸುಪ್ರೀಂಕೋರ್ಟ್
ನವದೆಹಲಿ , ಸೋಮವಾರ, 10 ಜುಲೈ 2017 (10:16 IST)
ಮದ್ಯ ದೊರೆ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
 

ಕೋರ್ಟ್ ಆದೇಶ ಉಲ್ಲಂಘಿಸಿ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಪ್ರಕರಣದಲ್ಲಿ ವಿಜಯ್ ಮಲ್ಯ ನ್ಯಾಯಾಂಗ ನಿಂದನೆ ಮಾಡಿರುವುದು ಸಾಬೀತಾಗಿದೆ ಎಂದು ಮೇ 9ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬ್ರಿಟನ್ನಿನಲ್ಲಿರುವ ವಿಜಯ್ ಮಲ್ಯ ಇವತ್ತು ಕೋರ್ಟ್`ಗೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
.
9000 ಕೋಟಿ ರೂ. ಸಾಲದ ಸುಸ್ತಿದಾರನಾಗಿರುವ ಮಲ್ಯನನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ, ಬ್ರಿಟನ್ ಸರ್ಕಾರಕ್ಕೆ ಮನವ ಮಾಡಿದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಬ್ರಿಟನ್ ಕಂಪನಿ ಡಿಯಾಜಿಯೋದಿಂದ ಪಡೆದ ಹಣವನ್ನ ಕೋರ್ಟ್ ಆದೇಶದಂತೆ ಬ್ಯಾಂಕ್`ಗಳ ಸಾಲ ಮರುಪಾವತಿಗೆ ಬಳಸದೇ ಮಕ್ಕಳಿಗೆ ವರ್ಗಾವಣೆ ಮಾಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್`ಗಳ ಒಕ್ಕೂಟ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!