ನವದೆಹಲಿ: ದೀಪಾವಳಿ ದಿನ ಪಟಾಕಿ ಹೊಡೆದು ಸಂಭ್ರಮಿಸೋಣವೆಂದು ಲೆಕ್ಕಾಚಾರ ಹಾಕಿದ್ದರೆ ಸ್ವಲ್ಪ ತಾಳಿ. ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ನಿರ್ಧಾರ ಕೈಗೊಳ್ಳಲಿದೆ.
ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಪಟಾಕಿಗೆ ನಿಷೇಧ ಹೇರಬೇಕೋ ಬೇಡವೋ ಎಂದು ತೀರ್ಪು ನೀಡಲಿದೆ.
ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಈಗಾಗಲೇ ಈ ಬಗ್ಗೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದೆ. ಅದರ ತೀರ್ಪು ಇಂದು ಹೊರಬೀಳಲಿದ್ದು, ದೇಶದ ಹಲವು ಪಟಾಕಿ ತಯಾರಿಕಾ ಕಂಪನಿಗಳ ಮೇಲೆ ಇದು ಭಾರೀ ಪರಿಣಾಮ ಬೀರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.