Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಪ್ ಸರ್ಕಾರದ ಅರ್ಜಿ ವಿಚಾರಣೆ ಮುಂದಕ್ಕೆ

ಆಪ್ ಸರ್ಕಾರದ ಅರ್ಜಿ ವಿಚಾರಣೆ ಮುಂದಕ್ಕೆ
ನವದೆಹಲಿ , ಶನಿವಾರ, 6 ಆಗಸ್ಟ್ 2016 (08:38 IST)
ದೆಹಲಿಯ ಸ್ಥಾನಮಾನ ಮತ್ತು ಆಡಳಿತಾತ್ಮಕ ನಿರ್ಧಾರದ ಅಧಿಕಾರದ ಕುರಿತು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಕ್ಕೆ ಹಾಕಿದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್​ಜಿ) ಅವರ ಅಧಿಕಾರಗಳನ್ನು ಪ್ರಶ್ನಿಸಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ ಗುರುವಾರ ಅರ್ಜಿ ವಜಾ ಮಾಡಿದ್ದು, ‘ಉಪರಾಜ್ಯಪಾಲರು ನಮ್ಮ ಸರ್ಕಾರದ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಬೇಕು ಎಂಬ ಆಪ್ ಸರ್ಕಾರದ ಪ್ರತಿಪಾದನೆಯು ಯಾವುದೇ ಆಧಾರವಿಲ್ಲದ್ದು. ಅದನ್ನು ಒಪ್ಪಲಾಗುವುದಿಲ್ಲ. ಉಪರಾಜ್ಯಪಾಲರೇ ರಾಷ್ಟ್ರ ರಾಜಧಾನಿ ಪ್ರದೇಶದ ಆಡಳಿತಾತ್ಮಕ ಮುಖ್ಯಸ್ಥ’ ಎಂದು ಹೇಳಿತ್ತು.

ಸಂವಿಧಾನದ 239 -ಎಎ  ವಿಧಿಯ ಪ್ರಕಾರ ದೆಹಲಿ ಕೇಂದಾಡಳಿತ ಪ್ರದೇಶವಾಗಿಯೇ ಉಳಿಯಲಿದೆ ಎಂದಿರುವ ಕೋರ್ಟ್ ಉಪರಾಜ್ಯಪಾಲರಿಗೆ ಮಾಹಿತಿ ನೀಡದೇ ಸಚಿವ ಸಂಪುಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿತ್ತು.

ಈ ತೀರ್ಪನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಹಿರಿಯ ವಕೀಲ ರಾಹುಲ್ ಮೆಹ್ತಾ  ಸುಪ್ರೀಂ ಮೆಟ್ಟಿಲೇರಿದ್ದು ಸಂವಿಧಾನದ 239-ಎಎ ವಿಧಿಯ ವ್ಯಾಪ್ತಿ ಮತ್ತು ನಿಖರ ವ್ಯಾಖ್ಯಾನ ಏನೆಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರ್ ಪ್ರವಾಹ: ಸಾವಿನ ಸಂಖ್ಯೆ 89ಕ್ಕೆ ಏರಿಕೆ