Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇರಳ ಲವ್ ಜಿಹಾದ್‌ ಪ್ರಕರಣದ ತನಿಖೆ ಎನ್‌ಐಎಗೆ: ಸುಪ್ರೀಂಕೋರ್ಟ್

ಕೇರಳ ಲವ್ ಜಿಹಾದ್‌ ಪ್ರಕರಣದ ತನಿಖೆ ಎನ್‌ಐಎಗೆ: ಸುಪ್ರೀಂಕೋರ್ಟ್
ನವದೆಹಲಿ , ಬುಧವಾರ, 16 ಆಗಸ್ಟ್ 2017 (19:07 IST)
ಹಿಂದು ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮುಸ್ಲಿಂ ಯುವಕನನ್ನು ವಿವಾಹದ ಪ್ರಕರಣ ಕುರಿತಂತೆ ಎನ್‌ಐಎ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್ ಅವರ ಮೇಲ್ವಿಚಾರಣೆಯಲ್ಲಿ ಎನ್ಐಎ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
 
ಹಿಂದೂ ಯುವತಿ ಅಖಿಲಾ ಅಶೋಕ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿ ಶಫಿನ್ ಜಹಾನ್ ಎಂಬಾತನನ್ನು ವಿವಾಹವಾಗಿರುವುದು ಪ್ರತ್ಯೇಕ ಘಟನೆಯಲ್ಲ. ಪೋಷಕರೊಂದಿಗೆ ಭಿನ್ನಾಭಿಪ್ರಾಯವಿರುವ ಅನೇಕ ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಹಿಂದೆ ಕೆಲವು ವ್ಯಕ್ತಿಗಳ ಕೈವಾಡವಿದೆ. ಇತರ ಮತಾಂತರ ಪ್ರಕರಣಗಳಲ್ಲೂ ಇದೇ ವ್ಯಕ್ತಿಗಳ ಕೈವಾಡ ಕಂಡುಬಂದಿದೆ ಎಂದು ಎನ್‌ಐಎ ಪರ ವಕೀಲ ಮಣಿದಂರ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  
 
ಒಂದು ವೇಳೆ, ಸುಪ್ರೀಂಕೋರ್ಟ್ ಲವ್ ಜಿಹಾದ್ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿದಲ್ಲಿ ಕೇರಳ ಸರಕಾರದಿಂದ ಯಾವುದೇ ಆಕ್ಷೇಪಣೆಯಿಲ್ಲ ಎಂದು ಸರಕಾರದ ಪರ ವಕೀಲರು ಕೋರ್ಟ್‌ಗೆ ಸ್ಪಷ್ಟನೆ ನೀಡಿದರು. 
 
ಎನ್ಐಎ ಮತ್ತು ಕೇರಳ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ, ಅಖಿಲಾ ವಿಚಾರಣೆ ನಡೆಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
 
ಪುತ್ರಿ ಅಖಿಲಾಳನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ವಿವಾಹಕ್ಕೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿ ಅಖಿಲಾ ತಂದೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಕೆಲ ಸಂಶಯಗಳು ವ್ಯಕ್ತವಾಗಿದ್ದರಿಂದ ಪೊಲೀಸ್ ತನಿಖೆ ನಡೆಸುವಂತೆ ಆದೇಶ ನೀಡಿತ್ತು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಅವರೇ ನೀವ್ಯಾರ್ರಿ ಲೆಕ್ಕ ಕೇಳೋಕೆ: ಸಿಎಂ ವಾಗ್ದಾಳಿ