ನವದೆಹಲಿ: ಹಿಂದಿ ಹೇರಿಕೆ ವಿರುದ್ಧ ಸೆಲೆಬ್ರಿಟಿಗಳು, ಜನನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ನಟಿ, ಸಂಸದೆ ಸುಮಲತಾ ಅಂಬರೀಶ್ ಹಿಂದಿ ಹೇರಿಕೆ ವಿರುದ್ಧ ಸಂಸತ್ತಿನಲ್ಲಿ ಧ‍್ವನಿಯೆತ್ತಿದ್ದಾರೆ.
ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಸುಮಲತಾ ಪ್ರಾದೇಶಿಕ ಭಾಷೆಯ ಮಹತ್ವ ಮತ್ತು ಹಿಂದಿ ಹೇರಿಕೆ ಸರಿಯಲ್ಲ ಎಂಬ ಕುರಿತಾಗಿ ಭಾಷಣ ಮಾಡಿದ್ದಾರೆ. ನಮ್ಮ ರಾಜ್ಯಗಳಲ್ಲಿ ನಮಗೆ ಹಿಂದಿಗಿಂತ ನಮ್ಮ ಪ್ರಾದೇಶಿಕ ಭಾಷೆಯ ಮೇಲೆ ಒಲವು ಹೆಚ್ಚು. ನಮಗೆ ನಮ್ಮ ಭಾಷೆಯೇ ಸುಲಭ. ಹೀಗಿರುವಾಗ ಹಿಂದಿ ಹೇರಿಕೆ ಸರಿಯಲ್ಲ ಎಂದು ಸುಮಲತಾ ಪ್ರತಿಪಾದಿಸಿದ್ದಾರೆ.