ತೇಜಪುರ್‌ದಿಂದ 60 ಕಿ.ಮೀ ದೂರ ತೆರಳಿದ ಬಳಿಕ ಸುಕೋಯಿ-30 ವಿಮಾನ ನಾಪತ್ತೆಯಾಗಿದ್ದು, ನಾಪತ್ತೆಯಾದ ವಿಮಾನಕ್ಕಾಗಿ ವಾಯುಸೇನೆ ಹುಟುಕಾಟ ಆರಂಭಿಸಿದೆ.
ತೇಜಪುರ್ ವಿಮಾನ ನಿಲ್ದಾಣದಿಂದ ಹಾರಿದ ವಿಮಾನ ಕೆಲವೇ ಕ್ಷಣಗಳಲ್ಲಿ ರಾಡಾರ್‌ನಿಂದ ಸಂಪರ್ಕ ಕಡಿದುಕೊಂಡಿದೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರೂ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಗಡಿಭಾಗದಲ್ಲಿ ವಿಮಾನ ನಾಪತ್ತೆಯಾಗಿರುವುದರಿಂದ ವಿಮಾನ ಅಪಘಾತವಾಗಿದೆಯೇ ಅಥವಾ ಚೀನಾ ಸೇನೆ ಹೊಡೆದುರುಳಿಸಿದೆಯೇ ಎನ್ನುವ ಹಲವು ಅನುಮಾನಗಳನ್ನು ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯುಸೇನೆಯ ಕೆಲ ಯುದ್ಧವಿಮಾನಗಳು ನಾಪತ್ತೆಯಾದ ವಿಮಾನ ಪತ್ತೆಗಾಗಿ ಹಾರಾಟ ನಡೆಸುತ್ತಿವೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.