ಪುಣೆಯ ವೈದ್ಯರ ತಂಡ ದೇಶದ ಮೊದಲ ಗರ್ಭಾಶಯ ಕಸಿ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಪೂರೈಸಿದ್ದಾರೆ. ಗರ್ಭಾಶಯ ಇಲ್ಲದೆ ಜನಿಸಿದ್ದ 21 ವರ್ಷದ ಮಹಿಳೆಗೆ ಆಕೆಯ ಗರ್ಭಾಶಯ ಕಸಿ ಮಾಡಲಾಗಿದೆ. ವಿಶೇಷವೆಂದರೆ, ಮಹಿಳೆಯ ತಾಯಿಯೇ ಈಕೆಗೆ ಗರ್ಭಾಶಯ ದಾನ ಮಾಡಿದ್ದಾರೆ. ಗ್ಯಾಲಕ್ಸಿ ಆಸ್ಪತ್ರೆಯಲ್ಲಿ ಶೈಲೇಶ್ ನೇತೃತ್ವದ12 ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.
`ಈ ಮಹಿಳೆ ಗರ್ಭಕೋಶ ಇಲ್ಲದೆ ಜನಿಸಿದ್ದರು. ಆದರೆ, ತಾನೇ ಮಗುವನ್ನ ಹಡೆಯುವ ಹಂಬಲ ಆಕೆಗಿತ್ತು.ದತ್ತು ಅಥವಾ ಬಾಡಿಗೆಯಾಯಿ ಮೂಲಕ ಮಗುವನ್ನ ಪಡೆಯಲು ನಿರಾಕರಿಸಿದ್ದರು. ಬಳಿಕ ಅವರು ಗರ್ಭಕೋಶ ಕಸಿಗೆ ನಮ್ಮ ಬಳಿ ಮನವಿ ಮಾಡಿದರು. ಅದೃಷ್ಟವಶಾತ್ ಆಕೆಯ ತಾಯಿಯ ಗರ್ಭಕೋಶ ವೈದ್ಯಕೀಯವಾಗಿ ಸರಿಹೊಂದಿತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿದೆವು ಅಂತಾರೆ ವೈದ್ಯರು.
ಇದು ದೇಶದ ಮೊದಲ ಗರ್ಭಕೋಸ ಕಸಿಯಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ ಇದೀಗ ತಾನೇ ಮಗುವನ್ನ ಹೆರುವ ಸಾಮರ್ಥ್ಯ ಪಡೆದಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ