ನವದೆಹಲಿ: ದೇಶದಲ್ಲಿ ಆರ್ಥಿಕತೆ ಕುಸಿದಿದೆ, ಜಿಡಿಪಿ ತಳಮಟ್ಟ ತಲುಪಿದೆ ಎಂಬ ಆರೋಪದಿಂದ ಪಾರಾಗಲು ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಹೊಸ ಐಡಿಯಾ ಕೊಟ್ಟಿದ್ದಾರೆ.
ದೇಶದ ಆರ್ಥಿಕತೆ ಸುಧಾರಿಸಬೇಕಾದರೆ ಭಾರತೀಯ ಕರೆನ್ಸಿ ಮೇಲೆ ಲಕ್ಷ್ಮೀ ದೇವಿಯ ಚಿತ್ರ ಮುದ್ರಿಸಬೇಕು. ಲಕ್ಷ್ಮೀ ಕೃಪಾಕಟಾಕ್ಷವಿದ್ದರೆ ಆರ್ಥಿಕತೆ ಸುಧಾರಿಸುತ್ತದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.
ಇಂಡೋನೇಷ್ಯಾದಲ್ಲಿ ಕರೆನ್ಸಿಗೆ ಗಣೇಶನ ಚಿತ್ರ ಮುದ್ರಿಸುತ್ತಾರೆ. ನಮ್ಮಲ್ಲಿ ಲಕ್ಷ್ಮೀ ಚಿತ್ರ ಮುದ್ರಿಸಲು ಮನವಿ ಮಾಡುತ್ತೇನೆ. ಇದರಿಂದ ಆರ್ಥಿಕತೆ ಸುಧಾರಿಸುತ್ತದೆ ಎಂದು ಸಂಸದರು ಹೇಳಿದ್ದಾರೆ. ಆದರೆ ಸುಬ್ರಹ್ಮಣಿಯನ್ ಸ್ವಾಮಿಯ ಈ ಹೇಳಿಕೆಗೆ ಈಗ ಟ್ವಿಟರ್ ನಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.