ಮಹಾನ್ ಸೇನಾನಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ, ಭಾರತೀಯರ ಆರಾಧ್ಯ ಸುಭಾಷ್ ಚಂದ್ರ ಬೋಸ್ ಅವರ ಕಾರು ಚಾಲಕರ ಕರ್ನಲ್ ನಿಜಾಮುದ್ದೀನ್ ಅಲಿಯಾಸ್ ಸೈಫುದ್ದೀನ್ ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 116 ವರ್ಷ ವಯಸ್ಸಾಗಿದ್ದು ಬರುವ ಎಪ್ರಿಲ್ ತಿಂಗಳಲ್ಲಿ 117ನೇ ವರ್ಷಕ್ಕೆ ಕಾಲಿಡುವವರಿದ್ದರು.
ಕರ್ನಲ್ 107 ವರ್ಷದ ತಮ್ಮ ಪತ್ನಿ ಅಜ್ಬುಲ್ ನಿಶಾ, ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅಜಮ್‌ಗಢ ಜಿಲ್ಲೆಯ ಮುಬಾರಕ್‌ಪುರದ ಧಕ್ವಾ ಗ್ರಾಮದಲ್ಲಿ ವಾಸವಾಗಿದ್ದ ಅವರು ದೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿದ್ದರು.
ಸಿಂಗಾಪುರದಲ್ಲಿ ಮೊದಲ ಬಾರಿಗೆ ನೇತಾಜಿ ಅವರನ್ನು ಭೇಟಿಯಾಗಿದ್ದ ನಿಜಾಮುದ್ದೀನ್ ಬಳಿಕ ಫೌಜ್‌ನಲ್ಲಿ ಕರ್ನಲ್ ಸ್ಥಾನಕ್ಕೇರಿದ್ದರು. ಸ್ವತಃ ನೇತಾಜಿ ಕರ್ನಲ್ ಬಿರುದು ನೀಡಿ ಸನ್ಮಾನಿಸಿದ್ದರು.
ತೆರೆಮರೆಯಲ್ಲಿಯೇ ಇದ್ದ ಅವರು ನೇತಾಜಿ ಸಾವಿನ ರಹಸ್ಯದ ಕುರಿತು ಚರ್ಚೆಯಾದಾಗಲೆಲ್ಲ ಸುದ್ದಿಯಾಗುತ್ತಲೇ ಇದ್ದರು. ಕಳೆದ ವರ್ಷ ಅವರು ಜಗತ್ತಿನ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮ್ಮ ಮತ್ತು ಪತ್ನಿ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅವರು ವಿವರ ಸಲ್ಲಿಸಿದ ವೇಳೆ ಈ ಮಾಹಿತಿ ಬಯಲಾಗಿತ್ತು .
2015ರಲ್ಲಿ ವಾರಣಾಸಿಯಲ್ಲಿ ನಿಜಾಮುದ್ದೀನ್ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ ಪಾದಸ್ಪರ್ಶಿಸಿ ಗೌರವವರ್ಪಿಸಿದ್ದರು.
2015ರಲ್ಲಿ ಬೋಸ್ ಮೊಮ್ಮಗಳು ಸಹ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ